ಮಕ್ಕಳ ಹಕ್ಕುಗಳ ಮಾಸೋತ್ಸವ ಪ್ರಯುಕ್ತ ಮುರ ಶಾಂತಿನಗರ ದಾರುಲ್ ಹುದಾ ರಹ್ಮಾನಿಯಾ ಹಿಫ್ಲ್ ಕಾಲೇಜಿನಲ್ಲಿ ಮಕ್ಕಳ ಹಕ್ಕುಗಳು, ಮೊಬೈಲ್ ಮತ್ತು ಮಾದಕ ವ್ಯಸನದ ದುಷ್ಪರಿಣಾಮದ ಕುರಿತು ಮಾಹಿತಿ

ಪುತ್ತೂರು: ಶಿಕ್ಷಣ ಸಂಪನ್ಮೂಲ ಕೇಂದ್ರ ಪುತ್ತೂರು
ಶಿಕ್ಷಣ ಸಂಪನ್ಮೂಲ ಕೇಂದ್ರಗಳ ಒಕ್ಕೂಟ(ರಿ)ದ.ಕ
ಮಕ್ಕಳ ಮಾಸೊತ್ಸವ ಸಮಿತಿ ಬೆಳ್ತಂಗಡಿ
ಮಕ್ಕಳ ಮಾಸೋತ್ಸವ ಸಮಿತಿ ದ ಕ ಜಿಲ್ಲೆ , ಪುತ್ತೂರು ಮುರ ಶಾಂತಿನಗರ ದಾರುಲ್ ಹುದಾ ರಹ್ಮಾನಿಯಾ ಹಿಫ್ಲ್ ಕಾಲೇಜಿನಲ್ಲಿ ಮಕ್ಕಳ ಹಕ್ಕುಗಳ ಬಗ್ಗೆ, ಮೊಬೈಲ್ ಬಳಕೆ ಮತ್ತು ಮಾದಕ ವ್ಯಸನದ ದುಷ್ಪರಿಣಾಮದ ಬಗ್ಗೆ ಮಾಹಿತಿ ಕಾರ್ಯಕ್ರಮ ನ.30ರಂದು ನಡೆಯಿತು.

ಕಾರ್ಯಕ್ರಮದಲ್ಲಿ ಜಿಲ್ಲಾ ಮಕ್ಕಳ ಕಲ್ಯಾಣಾಧಿಕಾರಿ ವಜ಼ೀರ್ ಅಹಮದ್ ರವರು ಮಕ್ಕಳ ಕಾನೂನು,ಕಲಿಕೆಯಲ್ಲಿ ಮಕ್ಕಳ ಪಾತ್ರ ಮತ್ತು ಮೊಬೈಲ್ ದುಷ್ಪರಿಣಾಮದ ಬಗ್ಗೆ ಮಾಹಿತಿ ನೀಡಿದರು. ಮಕ್ಕಳ ಮಾಸೋತ್ಸವ ಸಮಿತಿ ಜಿಲ್ಲಾ ಸಂಚಾಲಕ ರಫೀಕ್ ದರ್ಬೆ ಮಕ್ಕಳ ಹಕ್ಕುಗಳ ಬಗ್ಗೆ ಮಾಹಿತಿ ನೀಡಿದರು
ಮಕ್ಕಳ ಮಾಸೋತ್ಸವ ಬೆಳ್ತಂಗಡಿ ತಾಲೂಕು ಉಪಸಂಚಾಲಕ ಮೊಹಮ್ಮದ್ ನಜೀರ್ ಹೊಸಮೊಗ್ರು ಮಾದಕ ವ್ಯಸನದ ದುಷ್ಪರಿಣಾಮ ಮತ್ತು ಮಕ್ಕಳ ಭವಿಷ್ಯದ ಬಗ್ಗೆ ಮಾಹಿತಿ ನೀಡಿದರು. ವೇದಿಕೆಯಲ್ಲಿ
ಮುಖ್ಯ ಅದ್ಯಾಪಕರಾದ ಹಾಫಿಲ್ ಸಾಬಿತ್ ವಾಫಿ,ಹಾಫ಼ಿಲ್ ಶಮೀಮ್ ಹಜ್ರತ್ ಬಿಹಾರಿ, ಸ್ವಾಲಿ ಶಾಂತಿನಗರ ಉಪಸ್ಥಿತರಿದ್ದರು.



