ಕರಾವಳಿ

ಕುಂಬ್ರ ವರ್ತಕರ ಸಂಘದಿಂದ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸುಂದರ ರೈ ಮಂದಾರರಿಗೆ ಸನ್ಮಾನ

ಪುತ್ತೂರು: ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಕುಂಬ್ರ ವರ್ತಕರ ಸಂಘದ ಮಾಜಿ ಅಧ್ಯಕ್ಷ, ರಂಗಭೂಮಿ, ಸಿನಿಮಾ ಕಲಾವಿದ, ನಿರ್ದೇಶಕ, ನಟ ಸುಂದರ ರೈ ಮಂದಾರರವರಿಗೆ ಕುಂಬ್ರ ವರ್ತಕರ ಸಂಘದ ವತಿಯಿಂದ ಸನ್ಮಾನ ಕಾರ್ಯಕ್ರಮ ನ.10ರಂದು ಕುಂಬ್ರ ಅಶ್ವತ್ಥ ಕಟ್ಟೆಯ ಬಳಿ ನಡೆಯಿತು. ಸುಂದರ ರೈ ಮಂದಾರ ಹಾಗೂ ಅವರ ಪತ್ನಿ ಮಲ್ಲಿಕಾ ರೈ ಮಂದಾರರವರಿಗೆ ಸಂಘದ ವತಿಯಿಂದ ಶಾಲು,ಹಾರ ಹಾಕಿ, ಪೇಟಾ ತೊಡಿಸಿ, ಸ್ಮರಣಿಕ, ಫಲಪುಷ್ಪ ಅರ್ಪಿಸಿ ಸನ್ಮಾನಿಸಿ ಗೌರವಿಸಲಾಯಿರು. ಈ ಸಂದರ್ಭದಲ್ಲಿ ಸಂಘದ ಸ್ಥಾಪಕ ಅಧ್ಯಕ್ಷ ಶ್ಯಾಮ್‌ಸುಂದರ ರೈ ಕೊಪ್ಪಳ, ಸಂಘದ ಗೌರವ ಸಲಹೆಗಾರ ಅರಿಯಡ್ಕ ಅಬ್ದುಲ್ ರಹಿಮಾನ್ ಹಾಜಿ ಮಾತನಾಡಿದರು.

ಸುಂದರ ರೈ ಮಂದಾರ ಅವರು ಸಂಘದ ಮಾಜಿ ಅಧ್ಯಕ್ಷರಾಗಿ ಒಳ್ಳೆಯ ಕೆಲಸ ಮಾಡಿದ್ದಾರೆ, ರಂಗಭೂಮಿ, ಸಿನಿಮಾ ಕಲಾವಿದರಾಗಿ ರಾಜ್ಯದಲ್ಲೇ ದೊಡ್ಡ ಹೆಸರು ಮಾಡಿದ ಸುಂದರ ರೈ ಮಂದಾರರವರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಬಂದಿರುವುದು ಸಂಘಕ್ಕೆ ಹಾಗೂ ಊರಿಗೆ ಹೆಮ್ಮೆಯ ಸಂಗತಿ, ಈ ನಿಟ್ಟಿನಲ್ಲಿ ಅವರಿಗೆ ಸನ್ಮಾನಿಸಿದ್ದೇವೆ ಮುಂದೆ ರಾಜ್ಯ ಮಟ್ಟದ ಪ್ರಶಸ್ತಿ ದೊರೆಯಲಿ ಎಂದು ಕುಂಬ್ರ ವರ್ತಕರ ಸಂಘದ ಅಧ್ಯಕ್ಷ ಪಿ.ಕೆ ಮಹಮ್ಮದ್ ಕೂಡುರಸ್ತೆ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ವರ್ತಕರ ಸಂಘದ ಉಪಾಧ್ಯಕ್ಷ ಸದಾಶಿವ ಕುಂಬ್ರ, ಮಾಜಿ ಅಧ್ಯಕ್ಷರುಗಳಾದ ನಾರಾಯಣ ಪೂಜಾರಿ ಕುರಿಕ್ಕಾರ, ಮೆಲ್ವಿನ್ ಮೊಂತೆರೋ, ದಿವಾಕರ ಶೆಟ್ಟಿ, ರೇಷ್ಮಾ ಮೆಲ್ವಿನ್, ನಿಶ್ಮಿತಾ ಕಾಂಪ್ಲೆಕ್ಸ್ ಮಾಲಕ ಪುರಂದರ ರೈ ಕೋರಿಕ್ಕಾರು ಸಹಿತ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು. ಮಾಜಿ ಅಧ್ಯಕ್ಷ ಮೆಲ್ವಿನ್ ಮೊಂತೆರೋ ಸ್ವಾಗತಿಸಿ, ಕಾರ್ಯದರ್ಶಿ ಭವ್ಯ ರೈ ವಂದಿಸಿದರು.

Leave a Reply

Your email address will not be published. Required fields are marked *

error: Content is protected !!