ಕ್ರೈಂರಾಷ್ಟ್ರೀಯ

ದೆಹಲಿಯ ಕೆಂಪು ಕೋಟೆ ಬಳಿ ಸ್ಫೋಟ: ಹಲವು ದೇಹಗಳು ಛಿದ್ರ ಛಿದ್ರ

ನವದೆಹಲಿ: ದೆಹಲಿಯ ಕೆಂಪು ಕೋಟೆ ಬಳಿ ಕಾರಿನಲ್ಲಿ ಸ್ಫೋಟ ಸಂಭವಿಸಿದ್ದು ಹಲವು ದೇಹಗಳು ಛಿದ್ರ ಛಿದ್ರವಾಗಿದೆ. 8 ಮಂದಿ ಮೃತಪಟ್ಟಿರುವುದಾಗಿ ವರದಿಯಾಗಿದೆ. ಸ್ಫೋಟದ ನಂತರ, ಕಾರಿಗೆ ಬೆಂಕಿ ಹೊತ್ತಿಕೊಂಡಿದ್ದು, ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ.


ಸ್ಫೋಟಕಕ್ಕೆ ಕಾರಣ ಏನೆಂದು ಪತ್ತೆಯಾಗಿಲ್ಲ. ಅಗ್ನಿಶಾಮಕ ವಾಹನ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದ್ದು ಬೆಂಕಿ ನಂದಿಸುವಲ್ಲಿ ನಿರತರಾಗಿದ್ದಾರೆ.  ಕೆಂಪು ಕೋಟೆ ದೃಶ್ಯ ವೀಕ್ಷಣೆಗೆ ಜನರು ಭೇಟಿ ನೀಡುವುದರಿಂದ ಈ ಪ್ರದೇಶವು ಸಂಜೆಯ ಸಮಯದಲ್ಲಿ ಜನದಟ್ಟಣೆಯಿಂದ ಕೂಡಿರುತ್ತದೆ. ಸ್ಫೋಟದಿಂದ ಮೂರರಿಂದ 6 ಕಾರು, 3 ಆಟೋ ಸೇರಿ ಹಲವು ವಾಹನಗಳು ಬೆಂಕಿಯಿಂದ ಹೊತ್ತಿ ಉರಿದಿದೆ ಎನ್ನಲಾಗಿದೆ.

ಘಟನೆ ನಂತರ ದೆಹಲಿಯಲ್ಲಿ ಹೈಅಲರ್ಟ್ ಘೋಷಣೆ ಮಾಡಲಾಗಿದೆ. ಹಲವು ಪ್ರಮುಖ ರಸ್ತೆಗಳನ್ನು ಬಂದ್ ಮಾಡಲಾಗಿಗದೆ. ಘಟನಾ ಸ್ಥಳಕ್ಕೆ ಉನ್ನತ ತನಿಖಾ ತಂಡಗಳು ಭೇಟಿ ನೀಡಿದ್ದು ಪರಿಶೀಲನೆ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *

error: Content is protected !!