ಬೆಳ್ತಂಗಡಿ ಮಹಿಳೆ ನಾಪತ್ತೆ, ತೀವ್ರ ಹುಡುಕಾಟ
ಬೆಳ್ತಂಗಡಿ: ಕೊಯ್ಯೂರು ಮಲೆಬೆಟ್ಟು ನಿವಾಸಿಯಾಗಿರುವ ರಝೀನ(24ವ) ಎಂಬವರು ಕಳೆದ ಎರಡು ದಿನಗಳಿಂದ ನಾಪತ್ತೆಯಾಗಿದ್ದು ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.

ಬಿ.ಸಿ.ರೋಡಿನ ಕಾರಿಂಜದ ಮಹಮ್ಮದ್ ಸಲೀಂ ಎಂಬವರ ಪತ್ನಿಯಾದ ರಝೀನ ಜೂ.22ರಂದು ಸಂಜೆ 4.00ಗಂಟೆಗೆ ತಾಯಿ ಮನೆಯಿಂದ ಗಂಡನ ಮನೆಗೆ ಹೋಗುತ್ತೇನೆಂದು ಹೇಳಿ ಮನೆಯಿಂದ ಹೋಗಿದ್ದಳು ಆದರೆ ಆಕೆ ಗಂಡನ ಮನೆಗೆ ಹೋಗದಿರುವುದರಿಂದ ಸಂಬಂಧಿಕರು,ಸ್ನೇಹಿತರ ಮನೆಯಲ್ಲಿ ಹುಡುಕಾಡಿದರೂ ಎಲ್ಲೂ ಪತ್ತೆಯಾಗಿಲ್ಲ. ಈ ಹಿನ್ನಲೆಯಲ್ಲಿ ರಝೀನ ಮನೆಯವರು ಬೆಳ್ತಂಗಡಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇವರ ಬಗ್ಗೆ ಯಾವುದಾದರೂ ಮಾಹಿತಿ ಲಭ್ಯವಾದರೆ ಬೆಳ್ತಂಗಡಿ ಪೊಲೀಸ್ ಠಾಣೆಗೆ ತಿಳಿಸಲು ಕೋರಲಾಗಿದೆ.