ಬೈಕ್-ಟಿಪ್ಪರ್ ನಡುವೆ ಭೀಕರ ಅಪಘಾತ
ಬೈಕ್ ಸವಾರ ಯುವಕ ಮೃತ್ಯು
ಪುತ್ತೂರು: ಬೈಕ್ ಮತ್ತು ಟಿಪ್ಪರ್ ನಡುವೆ ಅಪಘಾತ ಸಂಭವಿಸಿದ ಪರಿಣಾಮ ಬೈಕ್ ಸವಾರ ಮೃತಪಟ್ಟ ಘಟನೆ ಕುಂಟಾರು ಬಳಿ ಎ.21ರಂದು ಸಂಜೆ ನಡೆದಿದೆ.

ಗಾಳಿಮುಖದ ದಿನಸಿ ಅಂಗಡಿಯೊಂದರಲ್ಲಿ ಕೆಲವು ವರ್ಷಗಳಿಂದ ಕೆಲಸ ಮಾಡುತ್ತಿದ್ದ ಕೊಟ್ಯಾಡಿ ನಿವಾಸಿ ದಿ.ಶೇಷಪ್ಪ ಎಂಬವರ ಪುತ್ರ
ಯೋಗೀಶ್ (22.ವ) ಮೃತಪಟ್ಟವರು.
ಅಪಘಾತದಿಂದ ಬೈಕ್ ಸಂಪೂರ್ಣ ನುಜ್ಜು ಗುಜ್ಜಾಗಿದೆ. ಮೃತರು ತಾಯಿ ಹಾಗೂ ಸಹೋದರ ಶಿವಪ್ಪ ಅವರನ್ನು ಅಗಲಿದ್ದಾರೆ.