ಅಂತಾರಾಷ್ಟ್ರೀಯಕರಾವಳಿ

ಚೆನ್ನಾವರದ ಫಯಾಝ್ ಹಾಜಿ ಸೌದಿ ಅರೇಬಿಯಾದಲ್ಲಿ ನಿಧನ

ಪುತ್ತೂರು: ಸೌದಿ ಅರೇಬಿಯಾ ಸರಕಾರದ ಸಾಪ್ಟಿಕೋ ಕಂಪೆನಿಯಲ್ಲಿ ರಿಯಾದ್ ಸಮೀಪದ ಅಲ್ ಗುವಯ್ಯ ಎಂಬಲ್ಲಿ ಹಲವಾರು ವರ್ಷಗಳಿಂದ ಸೇವೆಯಲ್ಲಿದ್ದ ಚೆನ್ನಾವರ ನಿವಾಸಿ ಮುಹಮ್ಮದ್ ಫಯಾಝ್ ಹಾಜಿ (58ವ) ರವರು ಎ.22ರಂದು ಸೌದಿ ಅರೇಬಿಯಾದಲ್ಲಿ ನಿಧನ ಹೊಂದಿದ್ದಾರೆ.

ಇವರು ಕರ್ನಾಟಕ ಕಲ್ಚರಲ್ ಫೌಂಡೇಶನ್ (ಕೆಸಿಎಫ್) ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದರು.

ಮೃತರು ಪತ್ನಿ ಸಫಾನ, ಪುತ್ರರಾದ ಅಬ್ದುಲ್ ರಹ್ಮಾನ್, ಅಹ್ಮದ್ ಫಾಯಿಝ್, ಅಯ್ಯೂಬ್ ಹಾಗೂ ಪುತ್ರಿ ಆಯಿಶತ್ ಹುದಾ ಹಾಗೂ ಸಹೋದರ , ಸಹೋದರಿಯರನ್ನು ಅಗಲಿದ್ದಾರೆ.

ಮೃತದೇಹದ ದಫನ ಕಾರ್ಯ ಸೌದಿ ಅರೇಬಿಯಾದಲ್ಲೇ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!