ಕರಾವಳಿಕ್ರೈಂ

ಪುತ್ತೂರು: ಹಾಡಹಗಲೇ ಯುವತಿಯ ಕೊಲೆ: ಆರೋಪಿ ವಿರುದ್ಧ ಕಠಿಣ ಕ್ರಮಕ್ಕೆ ವಿಮೆನ್ ಇಂಡಿಯಾ ಮೂವ್ಮೆಂಟ್ ಆಗ್ರಹ



ಪುತ್ತೂರು: ನಗರದ ಮಹಿಳಾ ಪೋಲಿಸ್ ಠಾಣಾ ಬಳಿಯಲ್ಲಿ ಪದ್ಮರಾಜ್ ಎಂಬ ಯುವಕನೋರ್ವ ಹಾಡಹಗಲೇ ಗೌರಿ ಎಂಬ ಯುವತಿಯನ್ನು ಚಾಕುವಿನಿಂದ ಇರಿದು ಕೊಲೆ ನಡೆಸಿದ ಕೃತ್ಯಕ್ಕೆ ವಿಮೆನ್ ಇಂಡಿಯಾ ಮೂವ್ಮೆಂಟ್ (WIM) ಪುತ್ತೂರು ವಿಧಾನಸಭಾ ಕಾರ್ಯದರ್ಶಿ ಝಾಹಿದಾ ಸಾಗರ್ ದಿಗ್ಬ್ರಮೆ ವ್ಯಕ್ತಪಡಿಸಿದ್ದು ಆರೋಪಿ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿದ್ದಾರೆ.

ಈ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು ಈ ಕೊಲೆಗಾರ 4 ವರ್ಷಗಳಿಂದ ಯುವತಿಗೆ ಕಿರುಕುಳ ನೀಡುತ್ತಿದ್ದ,ಹಾಗೂ ಈ ಬಗ್ಗೆ ವಿಟ್ಲ ಠಾಣೆಯಲ್ಲಿ ಈತನ ವಿರುದ್ಧ ದೂರು ನೀಡಿದ್ದರು. ಆಗಲೇ ಆತನ ವಿರುದ್ಧ ಪೊಲೀಸರು ಕಠಿಣ ಕ್ರಮ ಜರುಗಿಸಬೇಕಿತ್ತು. ಆತನ ಕಿರುಕುಳ ಮುಂದುವರಿದು ಇಂದು ದುರಂತ ಅಂತ್ಯವಾಗಿದೆ ಎಂದು ಅವರು ಆರೋಪಿಸಿದ್ದಾರೆ.

ಕೃತ್ಯ ನಡೆದು ಕೆಲವೇ ಗಂಟೆಗಳ ಅವಧಿಯಲ್ಲಿ ಆರೋಪಿಯನ್ನು ಪೊಲೀಸರು ಬಂಧಿಸಿರುವುದು ಸಮಾಧಾನಕರ ವಿಚಾರ. 2018ರಲ್ಲಿ ಸುಳ್ಯದಲ್ಲೂ ಇದೇ ರೀತಿಯ ಕೃತ್ಯ ನಡೆದು ಅಕ್ಷತಾ ಎಂಬ ಕಾಲೇಜ್ ವಿಧ್ಯಾರ್ಥಿನಿಯನ್ನು ಕಾರ್ತಿಕ್ ಎಂಬಾತ ಹತ್ಯೆ ಮಾಡಿದ್ದನು. ಹಾಗಾಗಿ ಪೋಲಿಸ್ ಇಲಾಖೆ ಇಂತಹ ಪ್ರಕರಣಗಳು ಬಂದಾಗ ಕ್ಷುಲ್ಲಕ ವಿಚಾರ ಎಂದು ಭಾವಿಸದೇ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅವರು ಹೇಳಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಪೋಲಿಸ್ ಇಲಾಖೆ ಕಾನೂನು ರೀತ್ಯಾ ಕ್ರಮ ಕೈಗೊಂಡು ತನಿಖೆಯಲ್ಲಿ ಯಾವುದೇ ವೈಫಲ್ಯವಾಗದಂತೆ ನೋಡಿಕೊಂಡು ಆರೋಪಿಗೆ ಕಠಿಣ ಶಿಕ್ಷೆ ಯಾಗುವಂತೆ ನೋಡಿಕೊಳ್ಳಬೇಕು ಹಾಗೂ ಯುವತಿಯ ಕುಟುಂಬಕ್ಕೆ ಸರ್ಕಾರ ಪರಿಹಾರ ಒದಗಿಸಬೇಕೆಂದು ಅವರು ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!