ಮಹಮ್ಮದ್ ಬಡಗನ್ನೂರು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ
ಪುತ್ತೂರು: ಮಹಮ್ಮದ್ ಬಡಗನ್ನೂರು ಅವರು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಇಸ್ಮಾಯಿಲ್ ಬ್ಯಾರಿ ಮತ್ತು ಬೀಪಾತಿಮ ದಂಪತಿಗಳ ಪುತ್ರರಾದ ಮಹಮ್ಮದ್ ಬಡಗನ್ನೂರು ಅವರು
1986 ರಿಂದ 1998 ರ ವರಗೆ ಬಡಗನ್ನೂರು ಹಾಲು ಉತ್ಪಾದಕರ ಸಂಘದ ಸ್ಥಾಪಕ ಕಾರ್ಯದರ್ಶಿಯಾಗಿ, ಪಡುಮಲೆ ಕೋಟಿ ಚೆನ್ನಯ ಯುವಕ ಮಂಡಲದ ಅಧ್ಯಕ್ಷನಾಗಿ, ಪಡುಮಲೆ ಕೋಟಿ ಚೆನ್ನಯ ಅಭಿವೃದ್ಧಿ ಸಮಿತಿಯ ಪದಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ.
ಪಡುಮಲೆಯನ್ನು ಪ್ರವಾಸಿತಾಣವನ್ನಾಗಿ ಮಾಡಲು ಸತತ ಪರಿಶ್ರಮ ಪಟ್ಟಿದ್ದಾರೆ.
ಪಡುಮಲೆ ಜುಮಾ ಮಸೀದಿಯ ಕಾರ್ಯದರ್ಶಿ ಹಾಗೂ ಪ್ರಸ್ತುತ ಅಧ್ಯಕ್ಷನಾಗಿ ಸೇವೆ ಸೇವೆ ಸಲ್ಲಿಸುತ್ತಿರುವ ಇವರು ಬಡಗನ್ನೂರು ಹಿರಿಯ ಪ್ರಾಥಮಿಕ ಶಾಲೆಯ ಹಳೇ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಮತ್ತು ಅಧ್ಯಕ್ಷನಾಗಿ ಸೇವೆ ಸಲ್ಲಿಸಿದ್ದಾರೆ.
ಪಡುಮಲೆ ಕೋಟಿ ಚೆನ್ನಯ ಜೇಸೀಸ್ ನ ಅಧ್ಯಕ್ಷನಾಗಿಯೂ ಸೇವೆ ಸಲ್ಲಿಸಿದ್ದಾರೆ.
1994-2000ದ ವರೆಗೆ ಬಡಗನ್ನೂರು ಗ್ರಾಮ ಪಂಚಾಯತ್ ಅಧ್ಯಕ್ಷನಾಗಿ ಸೇವೆಯ ನಂತರ ಉಪಾಧ್ಯಕ್ಷ ರಾಗಿ ಸೇವೆ ಸಲ್ಲಿಸಿದ್ದಾರೆ.
2000ನೇ ಇಸವಿಯಲ್ಲಿ ಪುತ್ತೂರು ತಾಲೂಕು ಪಂಚಾಯತ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. 2010 ರಿಂದ 2015 ರ ವರೆಗೆ ತಾಲೂಕು ಪಂಚಾಯತ್ ಸದಸ್ಯನಾಗಿ ಸೇವೆ ಸಲ್ಲಿಸಿದ್ದು
2002ರಿಂದ ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಸಂಪನ್ಮೂಲ ವ್ಯಕ್ತಿಯಾಗಿ ನೇಮಕಗೊಂಡಿದ್ದರು.
ಪ್ರಸ್ತುತ 22 ವರ್ಷಗಳಿಂದ ಕರ್ನಾಟಕ, ಕೇರಳ,N.I.R.D ಹೈದಾರಬಾದ್ ಮುಂತಾದ ಸ್ಥಳಗಳಲ್ಲಿ ಸಾವಿರಾರು ತರಬೇತಿಯಲ್ಲಿ ಭಾಗವಹಿಸಿದ್ದಾರೆ.
ಗ್ರಾಮ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸದಸ್ಯರರಿಗೆ ಪಂಚಾಯತ್ ರಾಜ್ ಕಾಯ್ದೆಯ ಬಗ್ಗೆ ತರಬೇತಿ ನೀಡುತ್ತಿರುವ ಮಹಮ್ಮದ್ ಬಡಗನ್ನೂರು ಅವರು 2010 ರಿಂದ ದಕ್ಷಿಣ ಕನ್ನಡ ಜಿಲ್ಲೆಯಿಂದ ಆಯ್ಕೆಯಾದ P.D.O, ಕಾರ್ಯದರ್ಶಿಗಳಿಗೆ ತರಬೇತಿ ನೀಡಿದ್ದಾರೆ. ಬಿಲ್ ಕಲೆಕ್ಟರ್, SDA ,ವಾಟರ್ ಮ್ಯಾನ್ ಇವರಿಗೆ ತರಬೇತಿ ನೀಡಿರುತ್ತಾರೆ
ಜಿಲ್ಲಾ ತರಬೇತಿ ಕೇಂದ್ರ D.T.I ಯಲ್ಲಿ ನಡೆದ ಅನೇಕ ತರಬೇತಿಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದಾರೆ. SKRDP ಯಲ್ಲಿ ನಡೆದ ತ್ಯಾಜ್ಯ ನಿರ್ವಹಣೆಯ ಬಗ್ಗೆ ನಡೆದ ತರಬೇತಿಯಲ್ಲಿ ಸಂಪನ್ಮೂಲ ವ್ಯಕ್ತಿ ಯಾಗಿ ಭಾಗವಹಿಸಿದ್ದಾರೆ. 2017 ರಲ್ಲಿ ನಡೆದ BRGF ತರಬೇತಿಯಲ್ಲಿ ದಾವಣಗೆರೆ, ರಾಯಚೂರು, ಎಚ್.ಡಿ ಕೋಟೆ ಮೊದಲಾದ ಜಿಲ್ಲೆಗಳಲ್ಲಿ ಜನಯೋಜನಾ ತರಬೇತಿಯಲ್ಲಿ ಭಾಗವಹಿಸಿದ್ದಾರೆ
ಎಲ್ಲಾ ವರ್ಗದ ಬಡ ಅನಾಥ ಅಶಕ್ತ ವ್ಯಕ್ತಿಗಳಿಗೆ,ವಿದ್ಯಾರ್ಥಿಗಳಿಗೆ ವೈದ್ಯಕೀಯ, ವಿದ್ಯಾರ್ಥಿ ವೇತನ, ಮದುವೆ, ವಸತಿಯ ಬಗ್ಗೆ ಸಹಾಯ ಮಾಡಿರುತ್ತಾರೆ. ಕುಂಬ್ರ ವ್ಯವಸಾಯ ಸೇವಾ ಸಹಕಾರಿ ಸಂಘದ ನಿರ್ದೇಶಕರಾಗಿ ಮತ್ತು ಉಪಾಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ.
ರಾಜಕೀಯವಾಗಿ ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುವ ಇವರು ಪ್ರಸ್ತುತ ಜಿಲ್ಲಾ ಕಾಂಗ್ರೆಸ್ ವಕ್ತಾರರಾಗಿ ಮತ್ತು ಪುತ್ತೂರು ಅಕ್ರಮ ಸಕ್ರಮ ಸಮಿತಿ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಒಟ್ಟಾರೆಯಾಗಿ 1986 ರಿಂದ ಇಲ್ಲಿಯ ವರೆಗೆ ಸುಮಾರು 38 ವರ್ಷಗಳಲ್ಲಿ ಸಮಾಜಿಕ, ಧಾರ್ಮಿಕ, ಶೈಕ್ಷಣಿಕ ಹಾಗೂ ಇನ್ನಿತರ ಸಮಾಜಮುಖಿ ಸೇವೆಯಲ್ಲಿ ಭಾಗವಹಿಸಿದ್ದಾರೆ. ಮಹಮ್ಮದ್ ಬಡಗನ್ನೂರು ಅವರು ಪತ್ನಿ ರುಕಿಯಾ,
ಪುತ್ರಿಯರಾದ ಝೀನತ್, ಝರೀನ ಆಯಿಷತ್ ಝಕೀಯ, ಪುತ್ರ ಜುನೈದ್ ಅನ್ವರ್ ಅವರೊಂದಿಗೆ
ಬಡಗನ್ನೂರಿನಲ್ಲಿ ವಾಸವಾಗಿದ್ದಾರೆ.