ಶಾಸಕನಾಗಿ ಎರಡೇ ತಿಂಗಳಲ್ಲಿ 960 ಕೋಟಿ ರೂ. ಅನುದಾನ ತಂದ ಶಾಸಕ ಅಶೋಕ್ ಕುಮಾರ್ ರೈ
ಪುತ್ತೂರು: ಶಾಸಕನಾಗಿ ಎರಡೇ ತಿಂಗಳಲ್ಲಿ ಶಾಸಕ ಅಶೋಕ್ ಕುಮಾರ್ ರೈ ಅವರು ಪುತ್ತೂರು ವಿಧಾನ ಸಭಾ ಕ್ಷೇತ್ರಕ್ಕೆ ರೂ.960 ಕೋಟಿ ಅನುದಾನವನ್ನು ತಂದಿದ್ದಾರೆ.
ಕ್ಷೇತ್ರ ವ್ಯಾಪ್ತಿಯಲ್ಲಿ 24 ಗಂಟೆಯೂ ಕುಡಿಯುವ ನೀರಿನ ವ್ಯವಸ್ಥೆ ಮಾಡುವ ಯೋಜನೆಗೆ ಸರಕಾರದಿಂದ 960 ಕೋಟಿ ರೂ ಮಂಜೂರು ಮಾಡಿಸಿದ್ದು ಟೆಂಡರ್ ಕರೆದ ಬಳಿಕ ಕಾಮಗಾರಿ ಆರಂಭವಾಗಲಿದೆ.
ಪುತ್ತೂರು ತಾಲೂಕು ಮತ್ತು ಸುಳ್ಯದ 30 ಗ್ರಾಮಗಳನ್ನು ಈ ವ್ಯಾಪ್ತಿಗೆ ಒಳಪಡಿಸಲಾಗಿದೆ ಎಂದು ವಿಟ್ಲದಲ್ಲಿ ನಡೆದ ಪಕ್ಷದ ಸಭೆಯಲ್ಲಿ ಶಾಸಕರು ಹೇಳಿದ್ದಾರೆ.