ಕರಾವಳಿ

ಚಂದ್ರಾ ಪ್ಯಾನ್ಸಿ ಮಾಲಕ ದಿನೇಶ್ ಆಚಾರ್ಯ ಹೃದಯಾಘಾತದಿಂದ ನಿಧನ



ಪುತ್ತೂರು: ಇಲ್ಲಿನ ಶ್ರೀಲಕ್ಷ್ಮೀ ವೆಂಕಟರಮಣ ದೇವಸ್ಥಾನ ಬಳಿಯ ಚಂದ್ರಾ ಫ್ಯಾನ್ಸಿ ಮಾಲಕ ದಿನೇಶ್ ಆಚಾರ್ಯ (58ವ.) ಅವರು ನ.15ರಂದು ಹೃದಯಾಘಾತದಿಂದ ನಿಧನರಾದರು.


ಆನೆಮಜಲು ನಿವಾಸಿಯಾಗಿದ್ದ ದಿನೇಶ್ ಆಚಾರ್ಯ ಅವರು  ಎದೆ ನೋವು ಕಾಣಿಸಿಕೊಂಡು ಕುಸಿದು ಬಿದ್ದರು. ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಆ ವೇಳೆಗಾಗಲೇ ಅವರು ಮೃತಪಟ್ಟಿದ್ದರು ಎಂದು ತಿಳಿದು ಬಂದಿದೆ. ಪುತ್ತೂರು ಲಕ್ಷ್ಮೀ ವೆಂಕಟರಮಣ ದೇವಸ್ಥಾನದ ಬಳಿಯ ಮೇಧಾ ಬಿಲ್ಡಿಂಗ್‌ ನಲ್ಲಿ ದಿನೇಶ್ ಆಚಾರ್ಯ ಅವರು  ಚಂದ್ರಾ ಫ್ಯಾನ್ಸಿ ಸ್ಟೋರ್ ಹೊಂದಿದ್ದರು. ಮೃತರು ತಾಯಿ, ಪತ್ನಿ  ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ.

ತನ್ನ ತರಗತಿ ಸಹಪಾಠಿ ಚಂದ್ರಾಪ್ಯಾನ್ಸಿ ಮಾಲಕರಾದ ದಿನೇಶ್ ಆಚಾರ್ಯ ಅವರ ನಿಧನ ಸುದ್ದಿ ತಿಳಿದ ಶಾಸಕ ಅಶೋಕ್ ರೈ ಅವರು ಮೃತರ ಅಂತಿಮ ದರ್ಶನ ಪಡೆದು ಕುಟುಂಬಕ್ಕೆ ಸಾಂತ್ವನ ತಿಳಿಸಿದರು.

Leave a Reply

Your email address will not be published. Required fields are marked *

error: Content is protected !!