ಬಿಲ್ಡರ್ ಗೆ 865 ವರ್ಷ ಜೈಲು
ಕಳೆದ ಫೆಬ್ರವರಿಯಲ್ಲಿ ಸಂಭವಿಸಿದ್ದ ಭೂಕಂಪದ ಸಂದರ್ಭ ಕುಸಿದುಬಿದ್ದ 14 ಅಂತಸ್ತಿನ ಕಟ್ಟಡದ ಕಳಪೆ ನಿರ್ಮಾಣ ಕಾಮಗಾರಿ ನಡೆಸಿದ ಪ್ರಕರಣದಲ್ಲಿ ಬಿಲ್ಡರ್ ಗೆ ಟರ್ಕಿಯ ನ್ಯಾಯಾಲಯ 865 ವರ್ಷ ಜೈಲುಶಿಕ್ಷೆ ವಿಧಿಸಿ ಆದೇಶಿದೆ.
ಕಟ್ಟಡ ಕುಸಿತದಲ್ಲಿ 96 ಮಂದಿ ಮೃತಪಟ್ಟಿದ್ದರು. ಬಿಲ್ಡರ್ ಹಸನ್ ಅಲ್ಪಾರ್ಗನ್ ಸಂಭವನೀಯ ಉದ್ದೇಶದಿಂದ ಹಲವಾರು ಜನರ ಸಾವು-ನೋವಿಗೆ ಕಾರಣರಾಗಿದ್ದಾರೆ’ ಎಂದು ನ್ಯಾಯಾಲಯ ಹೇಳಿದೆ.
ಕಟ್ಟಡ ಕುಸಿದ ಬಳಿಕ ಬಿಲ್ಡರ್ ಹಸನ್ ಸೈಪ್ರಸ್ ದೇಶಕ್ಕೆ ಪರಾರಿಯಾಗಿದ್ದು ಒಂದು ವಾರದ ಬಳಿಕ ಟರ್ಕಿಗೆ ಹಿಂತಿರುಗಿ ಪೊಲೀಸರಿಗೆ ಶರಣಾಗಿದ್ದರು. ನಿರ್ಮಾಣ ಕಾರ್ಯದ ಸಂದರ್ಭ ಕಳಪೆ ಗುಣಮಟ್ಟದ ಕಾಂಕ್ರೀಟ್, ಕಬ್ಬಿಣ ಬಳಸಿರುವುದು ದುರಂತಕ್ಕೆ ಕಾರಣ ಎಂದು ವಿಚಾರಣೆ ಸಂದರ್ಭ ತಾಂತ್ರಿಕ ತಜ್ಞರು ನ್ಯಾಯಾಲಯದಲ್ಲಿ ಹೇಳಿಕೆ ನೀಡಿದ್ದರು.