ದರ್ಬೆ ಚಾರಿಟೆಬಲ್ ಟ್ರಸ್ಟ್ ವತಿಯಿಂದ ಸಿಹಿ ವಿತರಣೆ
ಪುತ್ತೂರು: ದರ್ಬೆ ಚಾರಿಟೆಬಲ್ ಟ್ರಸ್ಟ್
ವತಿಯಿಂದ ಪ್ರವಾದಿ ಮುಹಮ್ಮದ್ ಮುಸ್ತಫ (ಸ.ಅ) ತಂಙಲರ ಜನ್ಮದಿನಾಚರಣೆಯ ಪ್ರಯುಕ್ತ ಈದ್ ಮಿಲಾದ್ ಸಮಿತಿ ವತಿಯಿಂದ ಪುತ್ತೂರಿನಲ್ಲಿ ನಡೆದ ಮೀಲಾದ್ ರ್ಯಾಲಿಗೆ ಸಿಹಿ ತಿಂಡಿ ವಿತರಿಸಲಾಯಿತು.
ಶಾಸಕ
ಅಶೋಕ್ ಕುಮಾರ್
ರೈ ಅವರು ಸಿಹಿ ತಿಂಡಿ ವಿತ
ರಣೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಅನ್ಸಾರುದ್ದೀನ್ ಜಮಾಅತ್ ಕಮಿಟಿ ಅಧ್ಯಕ್ಷ ಅಬ್ದುಲ್ ರಹಮಾನ್ ಆಜಾದ್, ದರ್ಬೆ ಚಾರಿಟೇಬಲ್ ಟ್ರಸ್ಟ್ ಇದರ ಅಧ್ಯಕ್ಷ ಅರ್ಷದ್ ದರ್ಬೆ, ಪ್ರಸನ್ನ ಕುಮಾರ್ ಶೆಟ್ಟಿ ಸಾಮೆತ್ತಡ್ಕ ಮತ್ತು ದರ್ಬೆ ಚಾರಿಟೇಬಲ್ ಟ್ರಸ್ಟ್ ನ ಸದಸ್ಯರು ಹಾಗೂ ಇನ್ನಿತರ ಹಲವರು ಉಪಸ್ಥಿತರಿದ್ದರು.