ಕರಾವಳಿ

ಪುತ್ತೂರಿಗೆ ಹೆಚ್ಚುವರಿ 5 ಕೆಪಿಎಸ್ ಸ್ಕೂಲ್: ಶಾಸಕ ಅಶೋಕ್ ರೈ

ಪುತ್ತೂರು: ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಹೆಚ್ಚುವರಿಯಾಗಿ 5 ಕೆಪಿಎಸ್ ಮಾದರಿ ಸ್ಕೂಲ್ ಮಂಜೂರು ಮಾಡುವಂತೆ ಶಿಕ್ಷಣ ಸಚಿವ ಮಧು ಬಂಗಾರಪ್ಪರಿಗೆ ಪುತ್ತೂರು ಶಾಸಕರಾದ ಅಶೋಕ್ ರೈ ಮನವಿ ಮಾಡಿದ್ದಾರೆ.


ಬೆಂಗಳೂರಿನಲ್ಲಿ ಸಚಿವರನ್ನು ಭೇಟಿಯಾದ ಶಾಸಕರು ಸದ್ಯ ಪುತ್ತೂರಿನಲ್ಲಿ ಎರಡು ಕೆಪಿಎಸ್ ಸ್ಕೂಲ್ ಗಳಿದ್ದು, ಈ ಎರಡೂ ಸ್ಕೂಲ್ ಗಳಲ್ಲಿ ಉತ್ತಮ ರೀತಿಯಲ್ಲಿ ಶಿಕ್ಷಣ ನೀಡಲಾಗುತ್ತಿದ್ದು ಮಕ್ಕಳ ದಾಖಲಾತಿಯೂ ಇದೆ. ಮುಂದಕ್ಕೆ ಪುತ್ತೂರಿಗೆ ಹೆಚ್ಚುವರಿಯಾಗಿ 5 ಸ್ಕೂಲ್ ಗಳನ್ನು ಮಂಜೂರು ಮಾಡುವಂತೆ ಮನವಿ ಮಾಡಿದ್ದಾರೆ.


ಗ್ರಾಮಾಂತರ ಭಾಗದಲ್ಲಿ ಕೆಲವೊಂದು ಸರಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕನಿಷ್ಠ ಮಟ್ಟಕ್ಕಿಂತಲೂ ಕಡಿಮೆ ಇದೆ. ಆ ರೀತಿಯ‌ಶಾಲೆಗಳನ್ನು ಕೆಪಿಎಸ್ ಸ್ಕೂಲ್ ಜೊತೆ ಮರ್ಜಿ ಮಾಡಲಾಗುತ್ತದೆ. ಕೆಪಿಎಸ್ ಮಾದರಿ ಶಾಲೆಗಳು ಪ್ರಾರಂಭ ಮಾಡಿದ್ದಲ್ಲಿ ಒಂದೇ ಕಡೆ ಗುಣಮಟ್ಟದ ಶಿಕ್ಷಣ ನೀಡಲು ಇದು ಸಹಕಾರಿಯಾಗಲಿದೆ ಎಂದು ಶಾಸಕರು‌ ಮನವಿಯಲ್ಲಿ ತಿಳಿಸಿದ್ದಾರೆ.

ಸಚಿವರಲ್ಲಿ 5 ಕೆಪಿಎಸ್ ಸ್ಕೂಲ್ ಗೆ ಮನವಿ ಮಾಡಿದ್ದೇನೆ. ಕೊಡುವ ಭರವಸೆಯನ್ನು ನೀಡಿದ್ದಾರೆ. ಗ್ರಾಮೀಣ ಭಾಗದಲ್ಲಿ ಸರಕಾರಿ ಶಾಲೆಯಲ್ಲಿ ಆಂಗ್ಲ ಮಾಧ್ಯಮ ತರಗತಿ ಆರಂಭವಾದಲ್ಲಿ ಬಡವರ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ ದೊರಕಿದಂತಾಗುತ್ತದೆ.‌ ಸರಕಾರಿ ಶಾಲೆಗಳನ್ನು ಉಳಿಸುವಲ್ಲಿಯೂ ಇದು ಪಾತ್ರ ವಹಿಸಲಿದೆ ಎಂದು ಶಾಸಕ
ಅಶೋಕ್ ರೈ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!