ನಾಳೆ (ಜೂ.13) ವಿಟ್ಲದಲ್ಲಿ The Knowledge Hub ಟ್ಯೂಷನ್ ಸೆಂಟರ್ ಶುಭಾರಂಭ
ವಿಟ್ಲ: The Knowledge Hub ಟ್ಯೂಷನ್ ಸೆಂಟರ್ ಜೂನ್ 13 ರಂದು ಗುರುವಾರ 10 ಘಂಟೆಗೆ ವಿಟ್ಲದ ಶಾಲಾ ರಸ್ತೆಯ ಮೋತಿ ಸಿಟಿ ಬಿಲ್ಡಿಂಗ್ ನಲ್ಲಿ ಶುಭಾರಂಭಗೊಳ್ಳಲಿದೆ.
ಇಲ್ಲಿ ಎಲ್ ಕೆ ಜಿ ಯಿಂದ ಪಿಯುಸಿ ವರೆಗಿನ ಮಕ್ಕಳಿಗೆ ಎಲ್ಲಾ ವಿಷಯದ ಬಗ್ಗೆ ಟ್ಯೂಶನ್ ನೀಡಲಾಗುತ್ತದೆ. ಸಂಜೆ 5 ಗಂಟೆಯಿಂದ 7.30 ವರೆಗೆ ಟ್ಯೂಶನ್ ನೀಡಲಾಗುತ್ತದೆ. ವಿವಿಧ ಕಾಲೇಜ್ ಗಳಲ್ಲಿ ವ್ಯಾಸಂಗ ಮಾಡಿ ಅನುಭವ ಇರುವ ಶಿಕ್ಷಕರು ತರಬೇತಿ ನೀಡಲಿದ್ದಾರೆ. ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ವಿಜ್ಞಾನ, ಗಣಿತ, ವಿಶೇಷ ಹೆಚ್ಚಿನ ಶಿಕ್ಷಕರನ್ನು ನಿಯೋಜಿಸಿ ತರಬೇತಿ ನೀಡಲಾಗುತ್ತದೆ. ಟ್ಯೂಶನ್ ಜತೆಯಲ್ಲಿ ಸ್ಕಿಲ್ ಡೆವಲಂಪ್ ಮೆಂಟ್ ಸೇರಿದಂತೆ ವಿದ್ಯಾರ್ಥಿಗಳಿಗೆ ಕಲಿಕೆಗೆ ಪೂರಕವಾಗುವ ವಿಷಯಗಳನ್ನು ತಿಳಿಸಿ ಕೊಡಲಾಗುತ್ತದೆ.
ನೂತನ ಸಂಸ್ಥೆಯನ್ನು ಜನಪ್ರಿಯ ಫೌಂಡೇಶನ್ ನ ಚೇರ್ ಮೆನ್ ಡಾ. ಅಬ್ದುಲ್ ಬಶೀರ್ ವಿ.ಕೆ ಉದ್ಘಾಟಿಸಲಿದ್ದಾರೆ. ತರಗತಿ ಕೊಠಡಿಯನ್ನು ಜೇಸಿಸ್ ಆಂಗ್ಲ ಮಾಧ್ಯಮ ಶಾಲೆಯ ಅಧ್ಯಕ್ಷ ಎಲ್. ಎನ್ ಕೂಡೂರು ಉದ್ಘಾಟಿಸಲಿದ್ದಾರೆ. ಲೋಗೋ ಅನಾವರಣವನ್ನು ಸೈಂಟ್ ರೀಟಾ ಶಾಲೆಯ ಮುಖ್ಯ ಶಿಕ್ಷಕರಾದ ವಂದನೀಯ ಫಾದರ್ ಸುನೀಲ್ ಪ್ರವೀಣ್ ಪಿಂಟೋ ನೆರವೇರಿಸಲಿದ್ದಾರೆ.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಹನೀಫ್ ಹಾಜಿ ಗೋಳ್ತಮಜಲು (ಅಧ್ಯಕ್ಷರು ಬಂಟ್ವಾಳ ತಾಲೂಕು ಸಂಯುಕ್ತ ಜಮಾಅತ್), ಕೃಷ್ಣಯ್ಯ ಕೆ ವಿಟ್ಲ ಅರಮನೆ, ರೋಷನ್ ಬೊನಿಫಾಸ್ ಮಾರ್ಟಿಸ್ (ಸಂಪಾದಕರು ಕರಾವಳಿ ಸುದ್ದಿ ವಾರ ಪತ್ರಿಕೆ), ಅಶ್ರಫ್ ಮುಹಮ್ಮದ್ ಪೊನ್ನೋಟು (ಅಧ್ಯಕ್ಷರು ಕೇಂದ್ರ ಜುಮಾ ಮಸೀದಿ ವಿಟ್ಲ), ರಶೀದ್ ವಿಟ್ಲ (ಅಧ್ಯಕ್ಷರು ಜಂಇಯತುಲ್ ಫಲಾಹ್ ಬಂಟ್ವಾಳ ತಾಲೂಕು), ಸುಬ್ರಾಯ ಪೈ (ಗೌರವಾಧ್ಯ್ಷಕರು ವಿಟ್ಲ ಸರಕಾರಿ ಪ್ರೌಢ ಶಾಲೆ RMSA), ಅರುಣ್ ಎಂ. ವಿಟ್ಲ (ಸದಸ್ಯರು ವಿಟ್ಲ ಪಟ್ಟಣ ಪಂಚಾಯತ್), ರವಿ ಪ್ರಕಾಶ್ (ಸದಸ್ಯರು ವಿಟ್ಲ ಪಟ್ಟಣ ಪಂಚಾಯತ್), ವಿ. ಕೆ. ಎಂ ಅಶ್ರಫ್( ಸದಸ್ಯರು ವಿಟ್ಲ ಪಟ್ಟಣ ಪಂಚಾಯತ್), ಶಾಕಿರ್ ಅಳಕೆಮಜಲು (ಪ್ರಧಾನ ಕಾರ್ಯದರ್ಶಿ ಡಿ ಗ್ರೂಪ್ ವಿಟ್ಲ), ಬಾಬು ಕೆ.ವಿ (ಅಧ್ಯಕ್ಷರು ವಾಣಿಜ್ಯ ಮತ್ತು ವರ್ತಕರ ಸಂಘ ವಿಟ್ಲ), ಕಿರಣ್ ಕುಮಾರ್ ಬ್ರಹ್ಮಾವರ (ಅಧ್ಯಕ್ಷರು ರೋಟರಿ ಕ್ಲಬ್ ವಿಟ್ಲ), ಶ್ರೀಮತಿ ಜಲಜಾಕ್ಷಿ (ಅಧ್ಯಕ್ಷರು ಲಯನ್ಸ್ ಕ್ಲಬ್ ವಿಟ್ಲ), ಎಂ.ಎಸ್ ಮುಹಮ್ಮದ್ (ಅಧ್ಯಕ್ಷರು ಪರಿಯಾಲ್ತಡ್ಕ ಜುಮಾ ಮಸೀದಿ), ಮುಹಮ್ಮದ್ ರಫೀಕ್ (ಎಂ.ಜಿ.ಆರ್ ಕಾರ್ಪೊರೇಷನ್ ವಿಟ್ಲ), ಅಬ್ದುಲ್ ರವೂಫ್ (ಮಾಲಕರು ಮೋತಿ ಸಿಟಿ) ಮೊದಲಾದ ಗಣ್ಯರು ಭಾಗವಹಿಸಲಿದ್ದಾರೆ.