ಪುತ್ತೂರು ಶಿಕ್ಷಣ ಸಂಪನ್ಮೂಲ ಕೇಂದ್ರದಿಂದ ಬೆಳ್ಳಿಪ್ಪಾಡಿ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ
ಪುತ್ತೂರು: ವಿಶ್ವ ಪರಿಸರ ದಿನಾಚರಣೆಯು ಪುತ್ತೂರು ತಾಲೂಕು ಶಿಕ್ಷಣ ಸಂಪನ್ಮೂನ ಕೇಂದ್ರದಿಂದ ಬೆಳ್ಳಿಪ್ಪಾಡಿ ಸ.ಹಿ ಪ್ರಾ.ಶಾಲೆಯಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಪುತ್ತೂರು ತಾಲೂಕು ಸಂಪನ್ಮೂಲ ಕೇಂದ್ರದ ಅದ್ಯಕ್ಷರಾದ ರಫೀಕ್ ದರ್ಬೆಯವರು ವಿದ್ಯಾರ್ಥಿಗಳೊಂದಿಗೆ ಗಿಡಕ್ಕೆ ನೀರು ಹಾಕುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಪ್ರತೀ ನಾಗರಿಕರಿಗೆ ದಿನವೊಂದಕ್ಕೆ ಕಡಿಮೆ ಪಕ್ಷ ಮೂರು ಸಿಲಿಂಡರಿನಷ್ಟು ಆಕ್ಸೀಜನ್ ಬೇಕಾಗಿದ್ದು,
ಹಿಂದಿನವರು ಗಿಡ ನೆಟ್ಟು ಬೆಳೆಸಿದ್ದರಿಂದ ಪ್ರಕೃತಿಯಿಂದ ಉತ್ತಮ ಗಾಳಿ ನಮಗೆ ಸಿಗುತ್ತಿದೆ, ಈ ನಿಟ್ಟಿನಲ್ಲಿ ಮರ ಗಿಡಗಳನ್ನ ಉಳಿಸಿಕೊಂಡು ಇನ್ನು ಬರುವವರಿಗೆ ಗಿಡ ನೆಡುವ ಮೂಲಕ ನಮಗೂ ನಮ್ಮ ಮುಂದಿನವರಿಗೂ ಆಕ್ಸಿಜನ್ ಕೊರತೆ ಬಾರದಿರಲು ಪ್ರತೀಯೊಬ್ಬರೂ ಒಂದೊಂದು ಗಿಡವನ್ನಾದರು ನೆಟ್ಟು ಬೆಳೆಸುವ ಮೂಲಕ ಸಮಾಜಕ್ಕೆ ಮಾದರಿಯಾಗೋಣ ಎಂದರು.
ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಚೈಲ್ಡ್ ರೈಟ್ ಟ್ರಸ್ಟ್ ಬೆಂಗಳೂರು ಇದರ ಪುತ್ತೂರು ತಾಲೂಕು ಕೋಡಿನೇಟರ್ ಶ್ರೀಮತಿ ಕಸ್ತೂರಿ ಬೊಳ್ವಾರ್ ಮಾತನಾಡಿ
ಮಕ್ಕಳಿಗೆ ಶಾಲಾ ಶಿಕ್ಷಣದ ಜೊತೆಗೆ ಜೀವನ ಶಿಕ್ಷಣದ ಪಾಠ ಅತೀ ಅಗತ್ಯವಿದ್ದು ಅದನ್ನು ಮಕ್ಕಳಿಗೆ ಹೆತ್ತವರು ನೀಡಲೇ ಬೇಕಾಗಿದ್ದು.ಮಕ್ಕಳ ಹೆತ್ತವರು ಮರ ಗಿಡ ಪ್ರಾಣಿ ಪಕ್ಷಿಗಳನ್ನ ಪ್ರೀತಿಸಿದರೆ ಮಕ್ಕಳು ಜೀವನ ಮೌಲ್ಯವನ್ನು ಕಲಿಯುವಂತಾಗುತ್ತದೆ ಎಂದರು
ಕಾರ್ಯಕ್ರಮದಲ್ಲಿ
ಶಿಕ್ಷಣ ಸಂಪನ್ಮೂಲ ಕೇಂದ್ರದ ಉಪಾದ್ಯಕ್ಷ ರೋಹಿಣಿ ರಾಘವ,ಕಾರ್ಯದರ್ಶಿ ಸುಮಂಗಲ ಶೆಣೈ , ಶಾಲಾ ಎಸ್ಡಿಎಂಸಿ ಉಪಾದ್ಯಕ್ಷ ರವಿ,ಮುಖ್ಯ ಶಿಕ್ಷಕಿ ಯಶೋದಾರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ವಿದ್ಯಾರ್ಥಿಗಳ ಪೋಷಕರು, ಅಧ್ಯಾಪಕರುಗಳಾದ ಸುಮಿತ್ರಾ ಎಸ್,
ಜಯಂತಿ ಎಂ, ಜೋಯ್ಲಿನ್ ರೋಡ್ರಿಗಸ್, ಮಲ್ಲಿಕಾರ್ಜುನ ಹಡಗಲಿ, ವೈಶಾಲಿ ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕಿ ಯಶೋಧ ಸ್ವಾಗತಿಸಿ ,ಸಹಶಿಕ್ಷಕಿ ಸಲೀನಾ ಎಂ ವಂದಿಸಿದರು.