ಸುಳ್ಯದ ಹಿರಿಯ ಉದ್ಯಮಿ, ಉಪೇಂದ್ರ ಕಾಮತ್ ನಿಧನ
ಸುಳ್ಯದ ಹಿರಿಯ ಉದ್ಯಮಿ, ಉಪೇಂದ್ರ ಕಾಮತ್(90.ವ) ಅವರು ನಿಧನರಾಗಿದ್ದಾರೆ. ವಯೋಸಹಜ ಅಸೌಖ್ಯದಿಂದ ಕೆಲವು ದಿನಗಳಿಂದ ಅಸ್ವಸ್ಥರಾಗಿದ್ದ ಅವರು ಇಂದು ವಿನೋಬ ನಗರದ ಸ್ವಗೃಹದಲ್ಲಿ ನಿಧನರಾಗಿದ್ದಾರೆ ಎಂದು ತಿಳಿದು ಬಂದಿದೆ.

1970ರ ದಶಕದಲ್ಲಿ ಕಾಸರಗೋಡಿನಿಂದ ಸುಳ್ಯಕ್ಕೆ ಬಂದ ಅವರು ಸುಳ್ಯದಲ್ಲಿ ಉದ್ಯಮಗಳನ್ನು ಸ್ಥಾಪಿಸಿದರು.
ರಾಜಕೀಯ, ಸಾಮಾಜಿಕ, ಧಾರ್ಮಿಕ ಕ್ಷೇತ್ರಗಳಲ್ಲಿ ಸಕ್ರೀಯರಾಗಿ ಗುರುತಿಸಿಕೊಂಡಿದ್ದರು. ಮೃತರು ಪತ್ನಿ, ಪುತ್ರ ಸುಧಾಕರ, ಸೊಸೆ, ಸಹಿತ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.