ಲೋಕ ಸಭಾ ಚುನಾವಣೆಯಲ್ಲಿ ಮಗ ಸೋಲಲಿ ಎಂದ ತಂದೆ ಎ.ಕೆ ಆಂಟನಿ
ಇತ್ತೀಚೆಗೆಷ್ಟೇ ಬಿಜೆಪಿಗೆ ಸೇರಿರುವ ಅನಿಲ್ ಆಂಟನಿ ಚುನಾವಣೆಯಲ್ಲಿ ಸೋಲಲಿ ಎಂದು ಅವರ ತಂದೆ ಎಕೆ ಆಂಟನಿ ಹೇಳಿದ್ದಾರೆ. ಕೇರಳದ ಪಟ್ಟನಂತಿಟ್ಟ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಟಿಕೆಟ್ನಲ್ಲಿ ಅನಿಲ್ ಆಂಟನಿ ಸ್ಪರ್ಧಿಸುತ್ತಿದ್ದಾರೆ. ಕಾಂಗ್ರೆಸ್ನ ಹಿರಿಯ ನಾಯಕರಾಗಿರುವ ಎಕೆ ಆಂಟನಿ ನನ್ನ ಮಗನನ್ನು ಚುನಾವಣೆಯಲ್ಲಿ ಸೋಲಿಸುವ ಅಗತ್ಯವಿದೆ ಎಂದಿದ್ದಾರೆ.

ಆ್ಯಂಟನಿ ಮಗನ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ. ಕಾಂಗ್ರೆಸ್ ವಿರುದ್ಧ ಚುನಾವಣೆಗೆ ಸ್ಪರ್ಧಿಸುವ ಬಿಜೆಪಿಯವರನ್ನು ಸೋಲಿಸಬೇಕಾಗುತ್ತದೆ, ಮಗ ಬಿಜೆಪಿಗೆ ಸೇರಿ ತಪ್ಪು ಮಾಡಿದ್ದಾರೆ ಎಂದು ಅವರು ಹೇಳಿದ್ದಾರೆ.