ಕರಾವಳಿರಾಜಕೀಯ

ಜಿಲ್ಲೆಯಲ್ಲಿ ಅಡಿಕೆಗೆ ಭವಿಷ್ಯವಿದೆ;
ಬಿಜೆಪಿಗೆ ಭವಿಷ್ಯವಿಲ್ಲ: ಅಶೋಕ್ ಪೂಜಾರಿ


ಪುತ್ತೂರು; ಅಡಿಕೆಗೆ ಭವಿಷ್ಯವಿಲ್ಲ ಆ ಕಾರಣಕ್ಕೆ ಅಡಿಕೆ ಬೆಳೆಗೆ ಪ್ರೋತ್ಸಾಹ ಧನ ನೀಡುವ ಅಗತ್ಯವಿಲ್ಲ ಎಂದು ಕರ್ನಾಟಕ ರಾಜ್ಯ ಗೃಹ ಸಚಿವ ಅರಗಜ್ಞಾನೇಂದ್ರ ಹೇಳಿದ್ದು ಇದು ಕೃಷಿ ಸಮುದಾಯದವರ ಆತ್ಮಸ್ಥೆರ್ಯವನ್ನು ಕುಗ್ಗಿಸುವ ಕೃತ್ಯವಾಗಿದೆ ಎಂದು ಒಳಮೊಗ್ರು ಗ್ರಾಮ ಸಮಿತಿ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಪೂಜಾರಿ ಬೊಳ್ಳಾಡಿ ಪ್ರತಿಕ್ರಿಯಿಸಿದ್ದಾರೆ.


ಅಡಿಕೆಗೆ ಭವಿಷ್ಯ ಇದೆ. ದ ಕ ಜಿಲ್ಲೆಯಲ್ಲಿ ಅತ್ಯಧಿಕ ಅಡಿಕೆ ಕೃಷಿಕರಿದ್ದಾರೆ, ಅಂದಿನಿಂದ ಇಂದಿನ ತನಕ ಅಡಿಕೆಯನ್ನೇ ನಂಬಿ ಬದುಕು ಕಟ್ಟಿದವರಿದ್ದಾರೆ, ಈಗಲೂ ಅಡಿಕೆಯಲ್ಲೇ ಜೀವನ ಸಾಗಿಸುತ್ತಿದ್ದಾರೆ. ಕೃಷಿಕರ ವಿರುದ್ದ ಹೇಳಿಕೆ ನೀಡಿರುವ ಗೃಹ ಸಚಿವರು ಕೃಷಿಕ ಸಮಾಜದ ಕ್ಷಮೆಯನ್ನು ಕೇಳಬೇಕು. ವಿದೇಶದಿಂದ ಅಡಿಕೆಯನ್ನು ಆಮದು ಮಾಡುವ ಉದ್ದೇಶ ಬಿಜೆಪಿ ಸರಕಾರಕ್ಕಿದ್ದು ಸಚಿವರ ಮಾತು ಕೇಳಿ ಅಡಿಕೆ ಕೃಷಿ ಮಾಡುವುದನ್ನು ಯಾರಾದರೂ ನಿಲ್ಲಿಸಿದ್ದಲ್ಲಿ ಜಿಲ್ಲೆಯಲ್ಲಿ ಅಡಿಕೆ ಕೃಷಿ ಬೆಳೆಗಾರರ ಸಂಖ್ಯೆ ಕಡಿಮೆಯಾಗಬಹುದು ಆ ಬಳಿಕ ಬಿಜೆಪಿ ತನ್ನ ಹಿಡನ್ ಅಜೆಂಡಾವನ್ನು ಬಳಸಿ ವಿದೇಶದಿಂದ ಅಡಿಕೆ ಆಮದು ಮಾಡಿಕೊಳ್ಳಬಹುದು. ಕರ್ನಾಟಕ ಕರಾವಳಿ ಜಿಲ್ಲೆಯಲ್ಲಿ ಅತೀ ಹೆಚ್ಚು ಅಡಿಕೆ ಈಗ ಉತ್ಪತ್ತಿಯಗುತ್ತಿದ್ದು ಅದನ್ನು ತಡೆಯಬೇಕು ಎಂಬ ಉದ್ದೇಶದಿಂದ ಸಚಿವರು ಈ ಹೇಳಿಕೆ ನೀಡಿದ್ದಾರೆ ಎಂದರು.

ಜಿಲ್ಲೆಯಲ್ಲಿ ಬಿಜೆಪಿಗೆ ಭವಿಷ್ಯವಿಲ್ಲ ಎಂದು ನಾವು ಹೇಳುತ್ತಿದ್ದು ಅಡಿಕೆಗೆ ಯಾವತ್ತೂ ಭವಿಷ್ಯವಿದೆ. ಆಡಳಿತ ಮಾಡುವ ಮಂದಿಗೆ ಕೃಷಿಕರ, ರೈತರ ಪರ ಕಾಳಜಿ ಇರಬೇಕಾಗುತ್ತದೆ. ಕೃಷಿಕರ ಉತ್ಸಾಹ ಕಡಿಮೆಗೊಳಿಸುವ ಹೇಳಿಕೆಯನ್ನು ಜವಾಬ್ದಾರಿಯುತ ಸ್ಥಾನದಲ್ಲಿರುವ ಮಂದಿ ಹೇಳಬಾರದು ಸಚಿವರ ಹೇಳಿಕೆಯನ್ನು ಕೃಷಿಕರು ಖಂಡಿಸಬೇಕಾಗುತ್ತದೆ ಎಂದು ಅಶೋಕ್ ಪೂಜಾರಿ ಅಭಿಪ್ರಾಯಿಸಿದರು.

Leave a Reply

Your email address will not be published. Required fields are marked *

error: Content is protected !!