ಗ್ರಾಹಕರೊಬ್ಬರೊಂದಿಗೆ ಅನುಚಿತ ಮಾತು: ಸುಳ್ಯದ ಮೆಸ್ಕಾಂ AE ಅಮಾನತು
ಗ್ರಾಹಕರೊಬ್ಬರೊಂದಿಗೆ ದೂರವಾಣಿಯಲ್ಲಿ ಅನುಚಿತವಾಗಿ ಮಾತನಾಡಿದ ಆಡಿಯೋ ವೈರಲ್ ಆಗಿದ್ದ ಹಿನ್ನೆಲೆಯಲ್ಲಿ ಸುಳ್ಯದ ಮೆಸ್ಕಾಂ ಅಸಿಸ್ಟೆಂಟ್ ಇಂಜಿನಿಯರ್ ಸುಪ್ರೀತ್ ಕುಮಾರ್ ರವರನ್ನು ಮೆಸ್ಕಾಂನ ಸೇವೆಯಿಂದ ಅಮಾನತುಗೊಳಿಸಿರುವುದಾಗಿ ತಿಳಿದು ಬಂದಿದೆ.

ಸುಪ್ರೀತ್ ಅವರು ಗ್ರಾಹಕರೋರ್ವರ ಜೊತೆ ಅನುಚಿತವಾಗಿ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.