ಕರಾವಳಿ

ಶಾಸಕರ ಕಚೇರಿಯಲ್ಲಿ ಇಂಜನಿಯರ್ ಮತ್ತು ಗುತ್ತಿಗೆದಾರರ ಸಭೆ
ನಗರಸಭಾ ವ್ಯಾಪ್ತಿ ಕಾಮಗಾರಿಯ ಪಿನ್‌ಟುಪಿನ್ ಮಾಹಿತಿ ನೀಡಬೇಕು: ಅಶೋಕ್ ರೈ


ಪುತ್ತೂರು: ನಗರಸಭಾ ವ್ಯಾಪ್ತಿಯಲ್ಲಿ ನಡೆಯುವ ಎಲ್ಲಾ ಕಾಮಗಾರಿಗಳ ಪಿನ್ ಟು ಪಿನ್ ಮಾಹಿತಿಯನ್ನು ಕಚೇರಿಗೆ ನೀಡಬೇಕು ಎಂದು ಪುತ್ತೂರು ಶಾಸಕರಾದ ಅಶೋಕ್ ರೈಯವರು ನಗರಸಭಾ ಮುಖ್ಯ ಇಂಜನಿಯರ್ ಮತ್ತು ಆಯುಕ್ತರಿಗೆ ಸೂಚನೆಯನ್ನು ನೀಡಿದ್ದಾರೆ.


ಅ. 19 ರಂದು ಪುತ್ತೂರು ಶಾಸಕರ ಕಚೇರಿ ಸಭಾಂಗಣದಲ್ಲಿ ನಡೆದ ಇಂಜಿನಿಯರ್ ಮತ್ತು ಗುತ್ತಿಗೆದಾರರ ಸಭೆಯಲ್ಲಿ ಶಾಸಕರು ಮಾತನಾಡಿದರು. ಪುತ್ತೂರು ನಗರಸಭಾ ವ್ಯಾಪ್ತಿಯಲ್ಲಿ ಟೆಂಡರ್ ಕರೆಯಲಾದ ಕಾಮಗಾರಿ, ಪ್ರಗತಿಯಲ್ಲಿ ಮತ್ತು ಪೂರ್ಣಗೊಂಡ ಕಾಮಗಾರಿಯ ಪೂರ್ಣ ವಿವರವನ್ನು ಶಾಸಕರು ಪಡೆದುಕೊಂಡರು.
ಟೆಂಡರ್ ಪ್ರಕ್ರಿಯೆ ಆನ್ ಲೈನ್ ಮೂಲಕ ನಡೆಯವುದೇ ಆದರೂ ಗುತ್ತಿಗೆದಾರರ ಬಳಿಕ ಕಾಮಗಾರಿ ನಡೆಸುವ ಸಲಕರಣೆಗಳು ಮತ್ತು ಅದಕ್ಕೆ ಅವರು ಸಮರ್ಥರೇ ಎಂಬುದನ್ನು ಕೂಡಾ ಖಾತ್ರಿಪಡಿಸಬೇಕು. ಟೆಂಡರ್‌ನಲ್ಲಿ ನೀಡಿದ ಸಮಯಕ್ಕೆ ಸರಿಯಾಗಿ ಎಲ್ಲಾ ಕಾಮಗಾರಿಗಳನ್ನು ಮಾಡಿ ಮುಗಿಸಬೇಕು. ಒಬ್ಬರಿಗೇ ಹೆಚ್ಚು ಗುತ್ತಿಗೆಯನ್ನು ನೀಡಿದರೆ ಕಾಮಗಾರಿ ವಿಳಂಬವಾಗುತ್ತದೆ ಈ ನಿಟ್ಟಿನಲ್ಲಿ ಇಂಜಿನಿಯರ್‌ಗಳು ಈ ಬಗ್ಗೆ ಪರಿಶೀಲನೆ ಮಾಡುತ್ತಿರಬೇಕಾಗುತ್ತದೆ. ನೆವ ಹೇಳಿ ಯಾವುದೇ ಕಾರಣಕ್ಕೂ ಕಾಮಗಾರಿಯನ್ನು ವಿಳಂಬ ಮಾಡಬಾರದು ಎಂದು ಶಾಸಕರು ಸೂಚನೆಯನ್ನು ನೀಡಿದರು.

ಮನೆ ಉಂಟು ಫಲಾನುಭವಿಗಳಿಲ್ಲ
ನಗರಸಭಾ ವ್ಯಾಪ್ತಿಯಲ್ಲಿರುವ ಎಸ್ ಸಿ ಮತ್ತು ಎಸ್ ಟಿ ಕುಟುಂಬಗಳಿಗೆ ಸರಕಾರದಿಂದ ಮನೆ ನಿರ್ಮಾಣಕ್ಕೆ ಅನುದಾನ ಬಾಕಿ ಇದೆ. ಫಲಾನುಭವಿಗಳಿಲ್ಲದ ಕಾರಣ ಅನುದಾನವನ್ನು ಹಂಚಿಕೆ ಮಾಡಲು ಸಾಧ್ಯವಾಗುತ್ತಿಲ್ಲ. ಅನುದಾನಕ್ಕೆ ದಾಖಲೆ ಸಮರ್ಪಕವಾಗಿಲ್ಲದೇ ಇರುವುದೇ ಇದಕ್ಕೆ ಕಾರಣವಾಗಿದೆ. ಜಾಗದ ದಾಖಲೆ ಪತ್ರಗಳು ಸಮರ್ಪಕವಾಗಿಲ್ಲದೇ ಇದ್ದರೆ ಅನುದಾನವನ್ನು ನೀಡಲು ಸಾಧ್ಯವಾಗುತ್ತಿಲ್ಲ ಎಂದು ನಗರಸಭಾ ಆಯುಕ್ತರಾದ ಮಧುಮನೋಹರ್ ತಿಳಿಸಿದರು. ಬಂದಿರುವ ಅನುದಾನ ವಾಪಸ್ ಹೋಗದಂತೆ ಮತ್ತು ಸೂಕ್ತ ಫಲಾನುಭವಿಗಳನ್ನು ಹುಡುಕಿ ಮನೆ ಇಲ್ಲದವರಿಗೆ ಅದನ್ನು ನೀಡುವ ಕೆಲಸ ಆಗಬೇಕು ಎಂದು ಶಾಸಕರು ತಿಳಿಸಿದರು.


ಕಾರ್ಯಕ್ರಮದಲ್ಲಿ ನಗರೊಥ್ಥಾನ ಮುಖ್ಯ ಇಂಜಿನಿಯರ್ ಪುರಂದರ್ ಕೋಟ್ಯಾನ್ ,ಪಿಎಂಸಿ ಇಂಜನಿಯರ್ ಭರತ್, ಇಂಜನಿಯರ್‌ಗಳಾದ ದುರ್ಗಾಪ್ರಸಾದ್, ಅರುಣ್, ಕೃಷ್ಣಮೂರ್ತಿ ರೆಡ್ಡಿ ಉಪಸ್ತಿತರಿದ್ದರು.

Leave a Reply

Your email address will not be published. Required fields are marked *

error: Content is protected !!