ಕೊಡಗು : ಮಾದಾಪುರ ಗೌಸಿಯ ಸಲಾತ್ ಕಮಿಟಿ ಸದಸ್ಯರಿಂದ ಶಾಸಕರ ಭೇಟಿ, ಗೌರವಾರರ್ಪಣೆ
ಕೊಡಗು ಜಿಲ್ಲೆ ಮಾದಾಪುರ ಗೌಸಿಯಾ ಸ್ವಲಾತ್ ಕಮಿಟಿ ಸದಸ್ಯರು ಸ್ಥಳೀಯ ಶಾಸಕರಾದ ಡಾ. ಮಂತರ್ ಗೌಡ ರವರ ನಿವಾಸಕ್ಕೆ ಭೇಟಿ ನೀಡಿ ಸಮಿತಿ ವತಿಯಿಂದ ಗೌರವ ಸಲ್ಲಿಸುವ ಕಾರ್ಯಕ್ರಮ ಇಂದು ನಡೆಯಿತು.
ಈ ಸಂದರ್ಭದಲ್ಲಿ ಗೌಸಿಯ ಸಲಾತ್ ಕಮಿಟಿ ವತಿಯಿಂದ ಶಾಸಕರಿಗೆ ಅಭಿನಂದನೆಯನ್ನು ಸಲ್ಲಿಸಿ ಗೌರವಿಸಿ ಸನ್ಮಾನಿಸಲಾಯಿತು.
ಸಮಿತಿ ಅಧ್ಯಕ್ಷ ಹಾಜಿ ಮಹಮ್ಮದ್ ನಜೀರ್, ಪ್ರಧಾನ ಕಾರ್ಯದರ್ಶಿ ಉಮ್ಮರ್, ಸಹ ಕಾರ್ಯದರ್ಶಿ ಫಹಾದ್, ಕೋಶಾಧಿಕಾರಿ ರಫೀಕ್ ಸೇರಿದಂತೆ ಸಮಿತಿಯ ಇತರ ಸದಸ್ಯರುಗಳು ಉಪಸ್ಥಿತರಿದ್ದರು.
ಸದಸ್ಯರನ್ನು ಆತ್ಮೀಯತೆಯಿಂದ ಬರಮಾಡಿಕೊಂಡ ಶಾಸಕರು ಸಮಿತಿಯ ಕಾರ್ಯ ಚಟುವಟಿಕೆಗಳ ಬಗ್ಗೆ ಮಾಹಿತಿ ಪಡೆದುಕೊಂಡರು.