ಕರಾವಳಿ

ಗಾಂಧಿನಗರ: ದಾರುಲ್ ಇಹ್ಸಾನ್ ದಶವಾರ್ಷಿಕ ಸಮ್ಮೇಳನದ ಸ್ವಾಗತ ಸಮಿತಿ ರಚನೆ



ಕಾಸರಗೋಡು ಜಿಲ್ಲೆಯ ಬದಿಯಡ್ಕದಲ್ಲಿ ಕಳೆದ ಹತ್ತು ವರ್ಷಗಳಿಂದ ಕಾರ್ಯಚರಿಸುತ್ತಿರುವ ದಾರುಲ್ ಇಹ್ಸಾನ್ ಎಜುಕೇಶನಲ್ ಸೆಂಟರ್ ಇದರ ದಶವಾರ್ಷಿಕ ಸಮ್ಮೇಳನ ಅಕ್ಟೋಬರ್ 20,21,22 ದಿನಾಂಕಗಳಲ್ಲಿ ನಡೆಯಲಿದ್ದು ಇದರ ಕರ್ನಾಟಕ ಪ್ರಚಾರ ಸಮ್ಮೇಳನದ ಸ್ವಾಗತ ಸಮಿತಿಯನ್ನು ಇಂದು ಗಾಂಧಿನಗರ ಸುನ್ನಿ ಸೆಂಟರ್ ನಲ್ಲಿ ರಚಿಸಲಾಯಿತು.

ಕರ್ನಾಟಕ ಮುಸ್ಲಿಂ ಜಮಾಅತ್ ಸುಳ್ಯ ಸರ್ಕಲ್ ಇದರ ಅಧ್ಯಕ್ಷರಾದ ಅಬ್ದುಲ್ ಹಮೀದ್ ಬೀಜಕೊಚ್ಚಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಗಾಂಧಿನಗರ ಜುಮಾ ಮಸೀದಿ ಆಡಳಿತ ಕಮಿಟಿಯ ಅಧ್ಯಕ್ಷ ಹಾಜಿ ಮುಸ್ತಫಾ ಜನತಾ ಕಾರ್ಯಕ್ರಮ ಉದ್ಘಾಟಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿದ್ಯಾ ಸಂಸ್ಥೆಯ ಕಾರ್ಯ ಚಟುವಟಿಕೆ ಮತ್ತು ಸಮ್ಮೇಳನದ ಕುರಿತು ಮುಖಂಡರಾದ ಬಶೀರ್ ಸಕಾಫಿ ಕೊಲ್ಯಮ್ ವಿವರಗಳನ್ನು ನೀಡಿದರು.


ವೇದಿಕೆಯಲ್ಲಿ ಮುಖಂಡರುಗಳಾದ ಜಿ ಎಸ್ ಅಬ್ದುಲ್ ಖಾದರ್ ಸಅದಿ, ಮೊಹಮ್ಮದ್ ಮದನಿ ಮೊಹಮ್ಮದ್ ಮದನಿ ಈಶ್ವರಮಂಗಲ, ಅನೀಸ್ ಸಅದಿ ಸವಣೂರು, ತಾಜುದ್ದೀನ್ ಸಅದಿ,ಸಲಾಂ ನಿಝಮಿ ಚೆನ್ನಾರ್, ಅಬ್ದುಲ್ ಹಮೀದ್ ಸುಣ್ಣಮೂಲೆ ಮೊದಲಾದವರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಸಮ್ಮೇಳನದ ಯಶಸ್ವಿಗಾಗಿ ಸ್ವಾಗತ ಸಮಿತಿಯನ್ನು ರಚಿಸಲಾಯಿತು. ಚೇರ್ಮೆನ್ ಆಗಿ ಅಬ್ದುಲ್ ಹಮೀದ್ ಬೀಜಕೊಚ್ಚಿ, ಕನ್ವೀನರ್ ಹಾಜಿ ಮುಸ್ತಫಾ ಜನತಾ, ಫೈನಾನ್ಸ್ ಸೆಕ್ರೆಟರಿ ಹಾಫಿಲ್ ಸಲಾಂ ನಿಜಾಮಿ ಚೆನ್ನಾರ್, ವಯ್ಸ್ ಚೇರ್ಮನ್ ಗಳಾಗಿ ಅಬೂಬಕ್ಕರ್ ಜಟ್ಟಿಪಳ್ಳ, ಅಬೂಬಕ್ಕರ್ ಸಿದ್ದೀಕ್ ಕಟ್ಟೆಕಾರ್, ಉಸ್ಮಾನ್ ಪೈಂಬೆಚಾಲು, ಅಬೂಬಕರ್ ಮುಸ್ಲಿಯರ್, ಎಬಿ ಅಶ್ರಫ್ ಸಅದಿ, ವಯ್ಸ್ ಕನ್ವಿನರುಗಳಾಗಿ ಅಬ್ದುಲ್ ಹಮೀದ್ ಸುಣ್ಣ ಮೂಲೆ, ಅಬ್ದುಲ್ ಲತೀಫ್ ಸಕಾಫಿ ಗೂನಡ್ಕ, ನೌಶಾದ್ ಕೆರೆಮೂಲೆ, ಹಸೈನಾರ್ ಜಯನಗರ, ಮತ್ತು 28 ಸದಸ್ಯರುಗಳನ್ನು ಒಳಗೊಂಡ ಸಮಿತಿ ರಚಿಸಲಾಯಿತು.


ಆಗಸ್ಟ್ 27ರಂದು ಪ್ರಚಾರ ಸಮಾರಂಭದ ಉದ್ಘಾಟನೆಯನ್ನು ಸುಳ್ಯದಲ್ಲಿ ನಡೆಸಲು ತೀರ್ಮಾನಿಸಲಾಗಿದ್ದು ಸಮಾರಂಭದಲ್ಲಿ ಖ್ಯಾತ ವಾಗ್ಮಿ ನೌಫಾಲ್ ಸಕಾಫಿ ಕಳಸ ಭಾಗವಹಿಸಲಿದ್ದಾರೆ. ಇಬ್ರಾಹಿಂ ಸಕಾಫಿ ಪುಂಡೂರು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *

error: Content is protected !!