ಅರಂತೋಡು ಅನೈತಿಕ ಪೊಲೀಸ್ ಗಿರಿ ಪ್ರಕರಣ: ಪೊಲೀಸ್ ಇಲಾಖೆ ಕೈಗೊಂಡ ಕ್ರಮ ಸ್ವಾಗತಾರ್ಹ– ಯೂತ್ ಕಾಂಗ್ರೆಸ್ ಅಧ್ಯಕ್ಷ ಹಮೀದ್ ಕುತ್ತಮಟ್ಟೆ
ಸುಳ್ಯ ಅರಂತೋಡಿನಲ್ಲಿ ನಿನ್ನೆ ರಾತ್ರಿ ನಡೆದಂತಹ ಸಂಘ ಪರಿವಾರದ ಕಾರ್ಯಕರ್ತರು ನಡೆಸಿದ ಅನೈತಿಕ ಪೊಲೀಸ್ ಗಿರಿಯ ಪ್ರಕರಣವನ್ನು ಪೋಲೀಸ್ ಇಲಾಖೆ ಕೂಡಲೆ ಸ್ಪಂದಿಸಿ ಆರೋಪಿಗಳನ್ನು ಪೊಲೀಸ್ ಠಾಣೆಗೆ ತಂದು ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ನಡೆಸಿದ ಕಾರ್ಯಾಚರಣೆ ಸ್ವಾಗತಾರ್ಹ ಎಂದು ಸುಳ್ಯ ಯೂತ್ ಕಾಂಗ್ರೆಸ್ ಅಧ್ಯಕ್ಷ ಅಬ್ದುಲ್ ಹಮೀದ್ ಕುತ್ತಮಟ್ಟೆ ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.
ಸಮಾಜದಲ್ಲಿ ಯಾವುದೇ ರೀತಿಯ ತಪ್ಪು ಕೆಲಸ ಕಾರ್ಯಗಳನ್ನು ಮಾಡುವವರಿಗೆ ಪ್ರಶ್ನಿಸಲು ಮತ್ತು ಶಿಕ್ಷಿಸಲು ಸಂವಿಧಾನದಲ್ಲಿ ಕಾನೂನು ಮತ್ತು ಕಾಯಿದೆಗಳು ಅದಕ್ಕೆ ಬೇಕಾದ ವ್ಯವಸ್ಥೆಗಳನ್ನು ರೂಪಿಸಿಕೊಂಡಿವೆ.ಆದ್ದರಿಂದ ತಪ್ಪು ಮಾಡಿದವರನ್ನು ಶಿಕ್ಷಿಸುವ,ಅವರ ಮೇಲೆ ಹಲ್ಲೆ ನಡೆಸುವ ಯಾವುದೇ ಹಕ್ಕು ಸಾರ್ವಜನಿಕರಿಗೆ ಇರುವುದಿಲ್ಲ. ತಪ್ಪಿತಸ್ಥರನ್ನು ಕಂಡರೆ ಪೊಲೀಸ್ ಇಲಾಖೆಗೆ ಮಾಹಿತಿ ನೀಡಬಹುದೇ ವಿನಹ ಹೊಡೆಯುವುದು ಬಡೆಯುವುದು ಸರಿಯಾದ ವಿಧಾನವೇ ಅಲ್ಲ. ಈ ದೃಷ್ಟಿಯಿಂದ ನಿನ್ನೆ ನಡೆದ ಘಟನೆಗೆ ಸಂಬಂಧಿಸಿದಂತೆ ಸುಳ್ಯ ಪೊಲೀಸ್ ಇಲಾಖೆಯವರು ಕೈಗೊಂಡ ಕ್ರಮ ಉತ್ತಮವಾಗಿದೆ. ತಪ್ಪಿತಸ್ಥರು ಯಾರೇ ಇರಲಿ, ಶಿಕ್ಷೆ ಆಗಬೇಕು. ಕಾನೂನಿನ ಪ್ರಕಾರ ಅವರಿಗೆ ಶಿಕ್ಷೆ ಆಗಲಿ ಎಂದು ಅವರು ತಿಳಿಸಿದ್ದಾರೆ.