ಕರಾವಳಿ

ಕಾಣಿಯೂರು: ವ್ಯಾಪಾರಿಗಳ ಮೇಲೆ ಗುಂಪು ಹಲ್ಲೆ ನಡೆಸಿದವರ ವಿರುದ್ಧ ಕಠಿಣ ಕ್ರಮಕೈಗೊಳ್ಳಲು ಆಗ್ರಹಿಸಿ ಪುತ್ತೂರು ಬ್ಲಾಕ್ ಕಾಂಗ್ರೆಸ್ ನಿಯೋಗದಿಂದ ಡಿ. ವೈ.ಎಸ್.ಪಿಗೆ ಮನವಿ

ಪುತ್ತೂರು ಪೊಲೀಸ್ ಉಪ -ವಿಭಾಗ ವ್ಯಾಪ್ತಿಯ ಕಡಬ ತಾಲ್ಲೂಕಿನ ಕಾಣಿಯೂರು ಎಂಬಲ್ಲಿ ಮನೆ ಮನೆ ವ್ಯಾಪಾರ ಮಾಡುತ್ತಿರುವ ಬಡಪಾಯಿಗಳಿಗೆ ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ದುಷ್ಕರ್ಮಿ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಪುತ್ತೂರು ಬ್ಲಾಕ್ ಕಾಂಗ್ರೆಸ್ ನಿಯೋಗವೊಂದು ಡಿ ವೈ ಸ್ ಪಿ ಕಚೇರಿಗೆ ಭೇಟಿ ನೀಡಿ ಆಗ್ರಹಿಸಿತು

ಕಾಣಿಯೂರುನಲ್ಲಿ ನಡೆದ ಈ ಹಲ್ಲೆಯ ವಿಡಿಯೋ ಸಾಮಾಜಿಕ ಜಾಲತಾಣ ವೈರಲ್ ಆಗಿದ್ದು, ಹಲ್ಲೆ ನಡೆಸುತ್ತಿರುವ ದೃಶ್ಯದ ವಿಡಿಯೋದಲ್ಲಿ ದುಷ್ಕರ್ಮಿ ಗಳ ಮುಖವು ಸ್ಪಷ್ಟವಾಗಿ ಕಾಣುತ್ತಿದ್ದು ಈ ಹಲ್ಲೆಯ ರೂವಾರಿ ಸ್ಥಳೀಯ ಗ್ರಾಮ ಪಂಚಾಯತ್ ನ ಉಪಾಧ್ಯಕ್ಷರಾಗಿದ್ದು ಅವರ ಕುಮ್ಮಕ್ಕಿನಿಂದ ನಡೆದ ಈ ಹಲ್ಲೆ ಪ್ರಕರಣದಲ್ಲಿ ಹಲವಾರು ದುಷ್ಕರ್ಮಿಗಳು ಭಾಗಿಯಾಗಿದ್ದು ಈ ಹಲ್ಲೆ ಘಟನೆಯು ಉತ್ತರ ಪ್ರದೇಶದಲ್ಲಿ ನಡೆಯುತ್ತಿರುವ ಗುಂಪು ಹಲ್ಲೆ ಮತ್ತು ಹತ್ಯೆ ಮಾದರಿಯಲ್ಲಿತ್ತು ಎಂಬುದಕ್ಕೆ ಈ ಹಲ್ಲೆ ಪ್ರಕರಣವೇ ಸಾಕ್ಷಿಯಾಗಿರುತ್ತದೆ.

ದ ಕ ಜಿಲ್ಲೆಯು ಅದರಲ್ಲೂ ಪುತ್ತೂರು, ಕಡಬ ಸುಳ್ಯ ತಾಲೂಕು ಕೋಮು ಗಲಭೆ ಹಿನ್ನಲೆ ಇರುವ ಸೂಕ್ಷ್ಮ ಪ್ರದೇಶವಾಗಿದ್ದು ಕೆಲವು ಸಂಘಟನೆಯಲ್ಲಿ ಗುರುತಿಸಿ ಕೊಂಡಿರುವ ದುಷ್ಕರ್ಮಿ ಗಳು ಪದೇ ಪದೇ ಇಂತಹ ಕೃತ್ಯಗಳನ್ನು ನಡೆಸಿ ಜಿಲ್ಲೆಯ ಕೋಮು ಸಾಮರಸ್ಯವನ್ನು ಹಾಳು ಮಾಡುವ ಕೆಲಸ ಮಾಡುತ್ತಿದೆ
ಪೊಲೀಸ್ ಇಲಾಖೆಯು ಇದನ್ನು ಗಂಭೀರವಾಗಿ ಪರಿಗಣಿಸಿ ಗುಂಪು ಹಲ್ಲೆ ನಡೆಸಿರುವ ದುಷ್ಕರ್ಮಿ ಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿತು

ನಿಯೋಗದಲ್ಲಿ ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ ಬಿ ವಿಶ್ವನಾಥ ರೈ, ವಿಟ್ಲ -ಉಪ್ಪಿನಂಗಡಿ ಬ್ಲಾಕ್ ಅಧ್ಯಕ್ಷ ಡಾ ರಾಜರಾಮ್ ಕೆ ಬಿ ಪುತ್ತೂರು ನಗರ ಕಾಂಗ್ರೆಸ್ ಅಧ್ಯಕ್ಷ ಎಚ್ ಮಹಮ್ಮದ್ ಅಲಿ,ಕೆಪಿಸಿಸಿ ಸಂಯೋಜಕ ಎನ್ ಚಂದ್ರಹಾಸ ಶೆಟ್ಟಿ, ಬ್ಲಾಕ್ ಕಾಂಗ್ರೆಸ್ ಪ್ರದಾನ ಕಾರ್ಯದರ್ಶಿ ಗಳಾದ ಅಮಳ ರಾಮಚಂದ್ರ ಭಟ್, ರಿಯಾಜ್ ಪರ್ಲಡ್ಕ, ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ರೋಷನ್ ರೈ ಬನ್ನೂರು, ಬ್ಲಾಕ್ ಅಲ್ಪ ಸಂಖ್ಯಾತ ಘಟಕದ ಅಧ್ಯಕ್ಷ ವಿ ಎಚ್ ಎ ಶಕೂರ್ ಹಾಜಿ ಉಪಸ್ಥಿತರಿದ್ದರು

Leave a Reply

Your email address will not be published. Required fields are marked *

error: Content is protected !!