ಉಡುಪಿ ವಿಡಿಯೋ ಪ್ರಕರಣ: ಸಿಐಡಿಗೆ ಹಸ್ತಾಂತರಿಸಿದ ರಾಜ್ಯ ಸರಕಾರ
ಉಡುಪಿ: ಇಲ್ಲಿನ ಖಾಸಗೀ ಪ್ಯಾರಾಮೆಡಿಕಲ್ ಕಾಲೇಜಿನ ಶೌಚಾಲಯದಲ್ಲಿ ವಿದ್ಯಾರ್ಥಿನಿಯರ ಖಾಸಗಿ ವಿಡಿಯೋ ಚಿತ್ರೀಕರಣ ಮಾಡಿದ ಪ್ರಕರಣದ ತನಿಖೆಯನ್ನು ಸಿಐಡಿಗೆ (CID) ಒಪ್ಪಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.

ಜುಲೈ 18 ರಂದು ನಡೆದಿದ್ದ ಘಟನೆ ಇದಾಗಿದ್ದು, ಜುಲೈ 26 ರಂದು ಪೊಲೀಸರು ಸುಮೋಟೋ ಕೇಸ್ ದಾಖಲಿಸಿದ್ದರು. ಘಟನೆ ವಿಚಾರವಾಗಿ ಎಬಿವಿಪಿ, ಬಿಜೆಪಿ, ಸಂಘ ಪರಿವಾರ ಉನ್ನತ ಮಟ್ಟದ ತನಿಖೆಗೆ ಆಗ್ರಹಿಸಿ ಪ್ರತಿಭಟನೆ ನಡೆಸಿತ್ತು.