ಕರಾವಳಿ

ಸುಳ್ಯ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಬೆಳ್ಳಿ ಹಬ್ಬ: ಮಾಧ್ಯಮ ವಿಚಾರ ಸಂಕಿರಣ

ಸುಳ್ಯ: ಪತ್ರಿಕಾ ಕ್ಷೇತ್ರ ನಿಂತ ನೀರಲ್ಲ. ಪತ್ರಿಕೆಗಳಿಗೆ ಭವಿಷ್ಯವಿದೆ.‌ ಆದರೆ ಪತ್ರಕರ್ತ ಸವಾಲುಗಳ‌ ನಡುವೆ ಕೆಲಸ ಮಾಡುತ್ತಿದ್ದಾನೆ ಎಂದು ಸುರೇಶ್ ಬೆಳಗಜೆ ಹೇಳಿದರು.

ಸುಳ್ಯ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಬೆಳ್ಳಿ ಹಬ್ಬದ ಕಾರ್ಯಕ್ರಮದಲ್ಲಿ ಮಾಧ್ಯಮ ವಿಚಾರಗೋಷ್ಠಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

“ಹಿಂದೆ ಮುದ್ರಣ ಮಾಧ್ಯಮಗಳು ಉತ್ತಮ ಪ್ರಸರಣ ಸಂಖ್ಯೆಯನ್ನು ಹೊಂದಿತ್ತು.‌ ಕೊರೊನಾ ಕಾಲದ ಬಳಿಕ ಎಲ್ಲ ಪತ್ರಿಕೆಗಳ ಪ್ರಸರಣದ ಸಂಖ್ಯೆ ಇಳಿಕೆಯಾಗಿದೆ. ಹಾಗಂದ ಮಾತ್ರಕ್ಕೆ ಪತ್ರಿಕೆಗಳಿಗೆ‌ ಭವಿಷ್ಯ ಇಲ್ಲ ಎಂದಲ್ಲ. ಪತ್ರಿಕೆಗಳು ನಿರಂತರವಾಗಿ ಸಮಾಜದ ಅಂಗವಾಗಿ ಕೆಲಸ ಮಾಡುತ್ತದೆ ಎಂದು ಅವರು ಹೇಳಿದರು.

ಸುದ್ದಿ ಯಾನ ಡಿಜಿಟಲ್ ಚಾನೆಲ್ ನ ಸಂಪಾದಕ ಹರಿಪ್ರಸಾದ್ ಅಡ್ಪಂಗಾಯ ಮಾತನಾಡಿ ಪತ್ರಕರ್ತರ ತನ್ನ ವೃತ್ತಿಗೆ‌ ನಿಷ್ಟನಾಗಿದ್ದಾರೆ ವಸ್ತು‌ನಿಷ್ಟ ವರದಿಯನ್ನು ತಮ್ಮ‌ ಓದುಗರಿಗೆ, ಪ್ರೇಕ್ಷಕರಿಗೆ ನೀಡಲು ಸಾಧ್ಯವಾಗುತ್ತದೆ.
ಪತ್ರಕರ್ತರಿಗೆ ವಿಶೇಷ ಸ್ವಾತಂತ್ರ್ಯ ಎಂಬುವುದು ಇಲ್ಲ. ವಾಕ್ ಸ್ವಾತಂತ್ರ್ಯ ಮಾತ್ರ ಆತನಿಗೆ ಇದೆ.‌ ಅದನ್ನು‌ ಸರಿಯಾಗಿ‌ ನಿಭಾಯಿಸಿದರೆ ಸಮಾಜವನ್ನು‌ ಸರಿದಾರಿಗೆ ಕೊಂಡುಹೋಗಲು ಸಾಧ್ಯ ಎಂದ ಅವರು ವಿದ್ಯಾರ್ಥಿಗಳು ಓದುವ ಹವ್ಯಾಸ ವೃದ್ಧಿಸಿಕೊಂಡರೆ ಅದು ತಮ್ಮ‌ ಜೀವನಕ್ಕೆ ಸಹಕಾರಿಯಾಗುತ್ತದೆ. ಮತ್ತು ಪತ್ರಿಕೋದ್ಯಮದಲ್ಲಿ ಮುಂದುವರಿಯಲು ಸಾಧ್ಯ ಎಂದು ಅವರು ಹೇಳಿದರು.

ವಿಸ್ತಾರ ನ್ಯೂಸ್ ಸುದ್ದಿ ಸಂಪಾದಕ ಹರೀಶ್ ‌ಕೇರ ಮಾತನಾಡಿ ಡಿಜಿಟಲ್ ಮಾಧ್ಯಮ ಬಂದ ಬಳಿಕ ಪತ್ರಿಕೋದ್ಯಮವನ್ನು ನೋಡುವ ರೀತಿ ಬದಲಾಗುತ್ತದೆ. ಎಲ್ಲ ಮಾಧ್ಯಮಗಳು ಇಂದು ಡಿಜಿಟಲ್ ರೂಪವನ್ನು ತಾಳಿದೆ. ಎಲ್ಲ ರೂಪದಲ್ಲಿಯೂ ಸುದ್ದಿಗಳನ್ನು ಜನರಿಗೆ ತಲುಪಿಸುತ್ತದೆ. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಹೊಸ ಹೊಸ‌ ವಿಭಾಗಗಳಿವೆ.‌ ಜನರನ್ನು ಬೇಗ ತಲುಪುತ್ತದೆ. ಅದರಲ್ಲಿಯೂ ಯುವ ಸಮೂಹ ಹೆಚ್ಚು ತೊಡಗಿಸಿಕೊಂಡಿದ್ದಾರೆ ಎಂದು ಹೇಳಿದರು.

ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ತಾಲೂಕು ಸಂಘದ ಅಧ್ಯಕ್ಷ ದಯಾನಂದ ಕೊರತ್ತೋಡಿ, ಬೆಳ್ಳಿ ‌ಹಬ್ಬ ಸಮಿತಿ ಅಧ್ಯಕ್ಷ ‌ಗಂಗಾಧರ ಮಟ್ಟಿ ವೇದಿಕೆಯಲ್ಲಿ ಇದ್ದರು.

ಕೃಷ್ಣಬೆಟ್ಟ ಸ್ವಾಗತಿಸಿದರು. ಗಣೇಶ್ ಮಾವಂಜಿ ಕಾರ್ಯಕ್ರಮ ನಿರೂಪಿಸಿದರು. ಹಸೈನಾರ್ ಜಯನಗರ ವಂದಿಸಿದರು.

Leave a Reply

Your email address will not be published. Required fields are marked *

error: Content is protected !!