ಮದುವೆ ದಿನವೇ ನವಜೋಡಿ ಹೊಡೆದಾಟ, ವಧು ಸಾವು
ಪ್ರೀತಿಸಿ ಮದುವೆಯಾದ ಜೋಡಿ ಕೆಲವೇ ಗಂಟೆಗಳಲ್ಲಿ ಹೊಡೆದಾಡಿಕೊಂಡ ಪರಿಣಾಮ ಗಾಯಗೊಂಡಿದ್ದ ವಧು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದರೆ, ವರ ಚಿಂತಾಜನಕ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾದ ಘಟನೆ ಕೋಲಾರ ಜಿಲ್ಲೆಯ ಕೆಜಿಎಫ್ ತಾಲೂಕಿನ ಚಂಬರಸನಹಳ್ಳಿಯಲ್ಲಿ ನಡೆದಿದೆ.
ವಧು ಲಿಖಿತಶ್ರೀ ಹಾಗೂ ವರ ನವೀನ್ ಆ.7ರಂದು ಸಪ್ತಪದಿ ತುಳಿದಿದ್ದರು. ಅದೇ ದಿನ ರೂಮಿನೊಳಗೆ ಹೋದ ಇಬ್ಬರೂ ಹೊಡೆದಾಡಿಕೊಂಡಿದ್ದಾರೆ. ಪರಿಣಾಮ ಇಬ್ಬರೂ ಗಂಭೀರವಾಗಿ ಗಾಯಗೊಂಡಿದ್ದು, ಕೂಡಲೇ ಇಬ್ಬರನ್ನು ಕೆಜಿಎಫ್ ಆಸ್ಪತ್ರೆಗೆ ದಾಖಲಿಸಲಾಗಿದೆ.ತೀವ್ರ ಗಾಯಗೊಂಡಿದ್ದ ವಧು ಲಿಖಿತಶ್ರೀ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಗಂಭೀರ ಸ್ಥಿತಿಯಲ್ಲಿದ್ದ ವರ ನವೀನ್ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಕೋಲಾರದ ಆಸ್ಪತ್ರೆಗೆ ರವಾನಿಸಲಾಗಿದೆ.