ಅಂತಾರಾಷ್ಟ್ರೀಯಕ್ರೀಡೆ

ಕ್ರಿಕೆಟ್’ಗೆ ವಿದಾಯ ಹೇಳಿದ ತಮೀಮ್ ಇಕ್ಬಾಲ್



ಏಕದಿನ ವಿಶ್ವಕಪ್ ಗೆ ಕೇವಲ ಮೂರು ತಿಂಗಳು ಬಾಕಿ ಇರುವಾಗಲೇ ಬಾಂಗ್ಲಾದೇಶ ಕ್ರಿಕೆಟ್ ತಂಡದ ನಾಯಕ ತಮೀಮ್ ಇಕ್ಬಾಲ್ ಅವರು ಅಚ್ಚರಿಯ ನಿರ್ಧಾರ ಘೋಷಿಸಿದ್ದಾರೆ. 16 ವರ್ಷಗಳ ಕಾಲ ಬಾಂಗ್ಲಾದೇಶದ ಪರ ಆಡುತ್ತಿರುವ ತಮೀಮ್ ತಕ್ಷಣದಿಂದ ಅನ್ವಯವಾಗುವಂತೆ ಎಲ್ಲಾ ಮಾದರಿಯ ಕ್ರಿಕೆಟ್ ಗೆ ವಿದಾಯ ಹೇಳಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ ಅವರು ಅತ್ಯಂತ ಭಾವುಕರಾಗಿ ಕಣ್ಣೀರು ಹಾಕಿ ತಮ್ಮ ವಿದಾಯ ನಿರ್ಧಾರವನ್ನು ಘೋಷಿಸಿದರು.
“ಇದು ನನಗೆ ಅಂತ್ಯ. ನಾನು ನನ್ನ ಕೈಲಾದಷ್ಟು ನೀಡಿದ್ದೇನೆ. ನನ್ನ ಅತ್ಯುತ್ತಮ ಪ್ರಯತ್ನ ಮಾಡಿದ್ದೇನೆ. ಈ ಕ್ಷಣದಿಂದ ನಾನು ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿಯಾಗುತ್ತಿದ್ದೇನೆ” ಎಂದು ತಮೀಮ್ ಹೇಳಿದ್ದಾರೆ.T

ತಮೀಮ್ ಇಕ್ಬಾಲ್ ಅವರ ಈ ನಿರ್ಧಾರ ಕ್ರಿಕೆಟ್ ಲೋಕದಲ್ಲಿ ಅಚ್ಚರಿ ಮೂಡಿಸಿದ್ದು ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.

Leave a Reply

Your email address will not be published. Required fields are marked *

error: Content is protected !!