ಕುಂಬ್ರ ನಿವಾಸಿ ಉಮ್ಮರ್ ಕಾಣೆ:
ಮಗನ ಮದುವೆ ಮುನ್ನಾ ದಿನವೇ ಅಪ್ಪ ನಾಪತ್ತೆ
ಪುತ್ತೂರು: ಒಳಮೊಗ್ರು ಗ್ರಾಮದ ಕುಂಬ್ರ ನಿವಾಸಿ ಉಮ್ಮರ್ ಎಂಬವರು ಜು.1 ರಂದು ನಾಪತ್ತೆಯಾಗಿದ್ದಾರೆ. ಮಧ್ಯಾಹ್ನ 3 ಗಂಟೆಯವರೆಗೆ ಪುತ್ತೂರಿನಲ್ಲಿದ್ದ ಇವರು ಆ ಬಳಿಕ ನಾಪತ್ತೆಯಾಗಿದ್ದು ಮೊಬೈಲ್ ಸ್ವಿಚ್ ಆಫ್ ಆಗಿದೆ ಎಂದು ತಿಳಿದು ಬಂದಿದೆ.

ಇವರ ಮಗನ ಮದುವೆ ಜು.3 ರಂದು ನಡೆಯಲಿದ್ದು ಜು.2 ರಂದು ನಡೆಯಬೇಕಿದ್ದ ಮದರಂಗಿ ಶಾಸ್ತ್ರ ಅಪ್ಪನಿಲ್ಲದ ಕಾರಣಕ್ಕೆ ರದ್ದು ಮಾಡಲಾಗಿದೆ. ಮನೆಯ ಯಜಮಾನ ದಿಡೀರನೆ ನಾಪತ್ತೆಯಾಗಿರುವುದು ಮತ್ತು ಮೊಬೈಲ್ ಸ್ವಿಚ್ ಆಫ್ ಆಗಿರುವುದು ಕುಟುಂಬಕ್ಕೆ ಆಘಾತ ಆಗಿದೆ.
ಎಲ್ಲಿದ್ದಾರೆ, ಎಲ್ಲಿ ಹೋಗಿದ್ದಾರೆ ಎಂದು ಪೊಲೀಸರು ಅವರ ಮೊಬೈಲ್ ಆಧಾರದಲ್ಲಿ ಹುಡುಕಾಟ ನಡೆಸುತ್ತಿದ್ದಾರೆ. ಗ್ರಾಮಾಂತರ ಠಾಣೆಯಲ್ಲಿ ಕೇಸು ದಾಖಲಾಗಿದೆ.