ಕರಾವಳಿ

ಸುಳ್ಯ: ಐರಾವತ ಬಸ್-ಆಂಬ್ಯುಲೆನ್ಸ್ ನಡುವೆ ಡಿಕ್ಕಿ ಆಂಬ್ಯುಲೆನ್ಸ್ ಜಖಂ



ಸುಳ್ಯ ತಾಲೂಕು ಪಾಲಡ್ಕ ಬಳಿ ಅಂಬುಲೆನ್ಸ್ ವಾಹನ ಮತ್ತು ಐರಾವತ ಬಸ್ಸಿನ ನಡುವೆ ಡಿಕ್ಕಿ ಸಂಭವಿಸಿ ಆಂಬುಲೆನ್ಸ್ ವಾಹನ ಜಖಂ ಗೊಂಡ ಘಟನೆ ಇಂದು ಸಂಜೆ ವರದಿಯಾಗಿದೆ.

ಸುಳ್ಯದ ಕೆ.ವಿ.ಜಿ. ಆಸ್ಪತ್ರೆ ಅಂಬ್ಯುಲೆನ್ಸ್ ನಲ್ಲಿ ಬೆಂಗಳೂರಿಗೆ ರೋಗಿ ಯೋರ್ವರನ್ನು ಕರೆದುಕೊಂಡು ಹೋಗುತ್ತಿದ್ದ ಸಂದರ್ಭ ಮಾಣಿ ಮೈಸೂರು ಹೆದ್ದಾರಿ ಸುಳ್ಯದ ಪಾಲಡ್ಕ ಬಳಿ ಸುಳ್ಯ‌ದತ್ತ ಬರುತ್ತಿದ್ದ ಐರಾವತ ಬಸ್ ಮಧ್ಯೆ ಡಿಕ್ಕಿ ಸಂಭವಿಸಿದೆ.

ಘಟನೆಯಿಂದ ಅಂಬ್ಯುಲೆನ್ಸ್ ನಲ್ಲಿ ಎದುರು ಕುಳಿತಿದ್ದ ಸ್ವಸ್ತಿಕ್ ಎಂಬ ಯುವಕನಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಅಪಾಯದಿಂದ ಪಾರಾಗಿದ್ದಾರೆ.
ಅಂಬ್ಯುಲೆನ್ಸ್ ನಜ್ಜುಗುಜ್ಜಾಗಿದ್ದು ಅದರಲ್ಲಿದ್ದ ರೋಗಿಯನ್ನು ಬೇರೆ ಆಂಬುಲೆನ್ಸ್ ಮೂಲಕ ಬೆಂಗಳೂರಿಗೆ ಕಳುಹಿಸಿಕೊಡಲಾಗಿದೆ.

Leave a Reply

Your email address will not be published. Required fields are marked *

error: Content is protected !!