ಉಪ್ಪಿನಂಗಡಿ: ಇಳಂತಿಳ ಜ್ಞಾನ ಭಾರತಿ ಆಂಗ್ಲ ಮಾದ್ಯಮ ಶಾಲೆಯಲ್ಲಿ “Say” No to Drugs” ಕಾರ್ಯಕ್ರಮ
ಉಪ್ಪಿನಂಗಡಿ: ಜ್ಞಾನ ಭಾರತಿ ಆಂಗ್ಲಮಾದ್ಯಮ ಶಾಲೆ ಇಳಂತಿಳ ಉಪ್ಪಿನಂಗಡಿ ಇಲ್ಲಿ “say” No to drugs” ಕಾರ್ಯ ಕ್ರಮ ನಡೆಯಿತು. ಕಾನೂನು ಬಾಹಿರ ಡ್ರಗ್ಸ್ ಬಗ್ಗೆ ಮಕ್ಕಳ ಜಾಗ್ರತಿ ಮೂಡಿಸುವ ಕಾರ್ಯಕ್ರಮ ನಡೆಯಿತು.

ಮಕ್ಕಳು ಭಾಷಣ ಮತ್ತು ಡ್ರಗ್ಸ್ ವಿರೋಧಿ ಘೋಷವಾಕ್ಯದ ಮೂಲಕ ಗಮನ ಸೆಳೆದರು. ಮಕ್ಕಳಿಗೆ ಡ್ರಗ್ಸ್ ವಿರೊಧಿ ಅಭಿಯಾನದ ಮೂಲಕ ಎಚ್ಚರಿಕೆ ನೀಡಿದ ಸಂಚಾಲಕರಾದ ರವೂಫ್ ಯು ಟಿ ಅವರು ಡ್ರಗ್ಸ್ ಜೀವನವನ್ನು ನಾಶಗೊಳಿಸುತ್ತದೆ ಎಂದು ಮಕ್ಕಳಿಗೆ ವಿವರಿಸಿದರು.
ಶಾಲೆಯ ಪ್ರಾಂಶುಪಾಲರಾದ ಇಬ್ರಾಹಿಂ ಕಲೀಲ್ ಹೇಂತಾರ್ ಮಾತನಾಡಿ ಎಲ್ಲಾ ವಿದ್ಯಾರ್ಥಿಗಳು ಕಾನೂನು ಬಾಹಿರ ಡ್ರಗ್ಸ್ ವಿರುದ್ಧ ಹೋರಾಟ ಮಾಡಿ ಸಮಾಜದಲ್ಲಿ ಇರುವ ಈ ರೀತಿಯ ಪಿಡುಗುಗಳನ್ನು ಹೋಗಲಾಡಿಸಬೇಕು ಅದರಲ್ಲಿ ವಿದ್ಯಾರ್ಥಿಗಳು ಮುಂದೆ ಬರಬೇಕು. ನಿಮ್ಮ ಮನೆ ಶಾಲೆ ಪರಿಸರದಲ್ಲಿ ಜನರಿಗೆ ಡ್ರಗ್ಸ್ ಬಗ್ಗೆ ಅರಿವು ಮೂಡಿಸಬೇಕು ಎಂದು ಸಲಹೆ ನೀಡಿದರು. ಶಾಲೆಯ ಗಣಿತ ಶಿಕ್ಷಕಿ ಫಾತಿಮ ಡ್ರಗ್ಸ್ ವಿರೊಧಿ ಪ್ರತಿಜ್ಞೆಯನ್ನು ವಿದ್ಯಾರ್ಥಿಗಳಿಂದ ಮಾಡಿಸಿದರು. ಇತರ ಸಹ ಶಿಕ್ಷಕರು ಉಷಾ ಅರುಣಾ ನೇತ್ರ ಮತ್ತು ಶಮೀಮಾ ಕಾರ್ಯಕ್ರಮದಲ್ಲಿ ಇದ್ದು ಮಕ್ಕಳಿಗೆ ಪ್ರೊತ್ಸಾಹಿಸಿದರು.
