ಜೆಸಿಬಿಯಲ್ಲಿ ವಧುವನ್ನು ಕರೆತಂದ ವರ…! ವಿಡಿಯೋ ವೈರಲ್
ವಧು ವರರು ಜೆಸಿಬಿ ಯಲ್ಲಿ ಬಂದು ಸುದ್ದಿಯಾಗಿದ್ದಾರೆ. ಜಾರ್ಖಂಡ್ ರಾಜ್ಯದ ರಾಂಚಿ ಮೂಲದ ರಾಜಾ ಕೃಷ್ಣ ಮಹತೋ ವಿವಾಹ ಇತ್ತೀಚೆಗೆ ನೆರವೇರಿದ್ದು ವರ ರಾಜಾ ಕೃಷ್ಣ ಮಂಟಪಕ್ಕೆ ಬಂದಿದ್ದಾರೆ. ಕಾರು ಅಥವಾ ಕುದುರೆಯಲ್ಲಿ ಬಂದಿಲ್ಲ. ಬದಲಾಗಿ ಜೆಸಿಬಿಯಲ್ಲಿ ಬಂದಿದ್ದಾರೆ.!

ವೃತ್ತಿಯಲ್ಲಿ ವಾಹನಗಳಿಗೆ ಹೂವು ಡೆಕೋರೇಟರ್ ಮಾಡುವ ಕಾಯಕವನ್ನು ಮಾಡುವ ರಾಜಾಕೃಷ್ಣ ಅವರ ಮದುವೆಯ ಮೆರವಣಿ ಸಾಗಿದ್ದು ಜೆಸಿಬಿಯಲ್ಲಿ. ಜೆಸಿಬಿಗೆ ಹೂವಿನ ಅಲಂಕಾರವನ್ನು ಮಾಡಿ ವರನ ಉಡುಗೆ ತೊಟ್ಟು ಮಂಟಪಕ್ಕೆ ಬಂದಿದ್ದಾರೆ.
ಮದುವೆಯ ಬಳಿಕ ಪತ್ನಿಯನ್ನು ಜೆಸಿಬಿಯಲ್ಲಿ ಕೂರಿಸಿಕೊಂಡು ಬಂದಿರುವುದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.