‘ಆಪಲ್’ ಕಂಪೆನಿಯ ಹೊಸ ಉತ್ಪನ್ನ ‘ಆಪಲ್ ವಿಶನ್ ಪ್ರೋ’
ಸಂಶೋಧನಾ ತಂಡದಲ್ಲಿ ಪುತ್ತೂರಿನ ಡಾ.ಯಶಸ್ ರೈ
ಪುತ್ತೂರು: ಇತ್ತೀಚೆಗೆ ಬಿಡುಗಡೆಯಾದ ಪ್ರತಿಷ್ಠಿತ ಆಪಲ್ ಕಂಪೆನಿಯ ಹೊಸ ಉತ್ಪನ್ನವಾದ ‘ಆಪಲ್ ವಿಶನ್ ಪ್ರೋ’ ಇದರ ಸಂಶೋಧನಾ ತಂಡದಲ್ಲಿದ್ದ ಪುತ್ತೂರಿನ ಡಾ.ಯಶಸ್ ರೈ ಅವರು ಸಾಧನೆ ಮಾಡಿದ್ದಾರೆ.

ನಾಲ್ಕು ವರ್ಷದಿಂದ ಸಂಶೊಧನಾ ತಂಡದೊಂದಿಗೆ ಸೇರಿಕೊಂಡು ಅವಿರತ ಪರಿಶ್ರಮಪಟ್ಟಿರುವ ಡಾ.ಯಶಸ್ ರೈ ಅವರು ಅಮೋಘ ಕೊಡುಗೆಯೊಂದನ್ನು ನೀಡಿದ್ದಾರೆ.
ಪುತ್ತೂರು ಕುರ್ಲೆತ್ತಿಮಾರು ದಿ.ಹರೀಶ್ ರೈ ಮತ್ತು ವಿಜಯಲಕ್ಷ್ಮೀ ರೈಯವರ ಪುತ್ರನಾಗಿರುವ ಡಾ.ಯಶಸ್ ರೈ ಅವರು ಮೈಸೂರಿನಲ್ಲಿ ಪ್ರಾಥಮಿಕ ಶಿಕ್ಷಣವನ್ನು ಪೂರೈಸಿದ್ದು ಜರ್ಮನಿಯಲ್ಲಿ ಎಂ.ಎಸ್ ಪದವಿಯನ್ನು ಪಡೆದು ಫ್ರಾನ್ಸ್‌ನ ನೇಂಟ್ಸ್ ಯುನಿವರ್ಸಿಟಿಯಿಂದ ಡಾಕ್ಟರೇಟ್ ಪದವಿ ಪಡೆದುಕೊಂಡಿದ್ದಾರೆ. ಪ್ರಸ್ತುತ ಅಮೇರಿಕಾದ ಪ್ರತಿಷ್ಠಿತ ಆಪಲ್ ಕಂಪೆನಿಯಲ್ಲಿ ಸಂಶೋಧಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಕುಂಬ್ರ ಕೋರಿಕ್ಕಾರು ಪುರಂದರ ರೈ ಮತ್ತು ಚಂದ್ರಕಲಾರವರ ಅಳಿಯನಾಗಿರುವ ಡಾ.ಯಶಸ್ ರೈಯವರು ಪತ್ನಿ ನಿಶ್ಮಿತಾ ರೈ ಮತ್ತು ಪುತ್ರ ಹನ್ಸ್ ರೈ ಜೊತೆ ಕ್ಯಾಲಿಫೋರ್ನಿಯಾದ ಸ್ಯಾನ್‌ಜೋಸ್ ಪಟ್ಟಣದಲ್ಲಿ ವಾಸವಾಗಿದ್ದಾರೆ.