ಕರಾವಳಿರಾಜಕೀಯ

ಸುಳ್ಯ ಕಾಂಗ್ರೆಸ್: ನಾಯಕರ ಉಚ್ಚಾಟನೆ ಪಕ್ಷಕ್ಕೆ ದುಬಾರಿಯಾಗಲಿದೆ-ಹೈದರಾಲಿ ಐವತ್ತೊಕ್ಲು



ಸುಳ್ಯದಲ್ಲಿ ಕಾರ್ಯಕರ್ತರ ಭಾವನೆಗಳಿಗೆ ಮನ್ನಣೆ ನೀಡದೆ ಆರಂಭದಿಂದಲೇ ಗೊಂದಲ ಸೃಷ್ಟಿಸಲಾಗಿದ್ದು ನಾಯಕರೆನಿಸಿಕೊಂಡವರು ಜವಾಬ್ದಾರಿ ಮೆರೆತಂತೆ ವರ್ತಿಸಿದ್ದಾರೆ. ಪ್ರಾಮಾಣಿಕವಾಗಿ ಪಕ್ಷದ ಕೆಲಸ ಮಾಡದೆ, ಕೆಲವು ಬೂತ್ ಗಳಲ್ಲಿ ಬಂದ ಹಣವನ್ನು ಕೆಲವೇ ಮಂದಿ ತಮ್ಮೊಳಗೆ ಹಂಚಿಕೊಂಡು ಮನೆ ಮನೆಗೆ ಪಕ್ಷದ ಗ್ಯಾರಂಟಿ ಕಾರ್ಡು, ಭರವಸೆಗಳನ್ನು ತಲುಪಿಸುವಲ್ಲಿ ವಿಫಲರಾದರು. ಹಾಗಾಗಿ ಸಹಜವಾಗಿ ಕಾಂಗ್ರೆಸ್ ಗೆ ಸೋಲುಂಟಾಯಿತು ಎಂದು ಸಾಹಿತಿ ಹೈದರಾಲಿ ಐವತ್ತೊಕ್ಲು ಅಭಿಪ್ರಾಯಪಟ್ಟಿದ್ದಾರೆ.

ಸೋಲಿಗೆ ಜಿಲ್ಲಾ ಅಧ್ಯಕ್ಷರು, ತಾಲೂಕು ಅಧ್ಯಕ್ಷರುಗಳು ನೈತಿಕ ಹೊಣೆ ಹೊತ್ತು ಇನ್ನು ಮುಂದೆ ಪಕ್ಷವನ್ನು ಸಮರ್ಥವಾಗಿ ಕಟ್ಟುವ ಕಾರ್ಯವನ್ನು ಮಾಡಬೇಕಾದ ಸಮಯದಲ್ಲಿ ಹಲವರನ್ನು ಪಕ್ಷ ವಿರೋಧಿ ಕಾರ್ಯ ಮಾಡಿದ್ದಾರೆ ಎಂಬ ಕಾರಣ ಕೊಟ್ಟು ಪಕ್ಷದಿಂದ ಉಚ್ಛಾಟಿಸುವ ಅವಿವೇಕದ ಕಾರ್ಯ ನಡೆಸಿದ್ದಾರೆ.
ಈ ನಿರ್ಧಾರ ಪಕ್ಷಕ್ಕೆ ದುಬಾರಿಯಾಗಲಿದೆ ಎಂದು ಅವರು ತಿಳಿಸಿದ್ದಾರೆ.

ಆರಂಭದಲ್ಲಿ ಅಭ್ಯರ್ಥಿಯ ಆಯ್ಕೆ ವಿಚಾರದಲ್ಲಿ ಗೊಂದಲದಲ್ಲಿದ್ದರೂ ನಂತರ ರಮಾನಾಥ ರೈಯವರ ಮಾತಿಗೆ ಮನ್ನಣೆ ನೀಡಿ, ಪಕ್ಷದ ಪರವಾಗಿ ಕೆಲಸ ಮಾಡಿದ್ದಾರೆ. ಇದೀಗ,ರಾಜ್ಯ ನಾಯಕರಿಗೆ ತಪ್ಪು ಮಾಹಿತಿ ನೀಡಿ ಹಲವು ನಾಯಕರನ್ನು ಉಚ್ಛಾಟಿಸುವ ನಿರ್ಧಾರ ಕೈಗೊಂಡಿರುವುದು ಪಕ್ಷಕ್ಕೆ ದುಬಾರಿಯಾಗಲಿದೆ.ಮತ್ತು ಪಕ್ಷವನ್ನು ಇನ್ನಷ್ಟು ದುರ್ಬಲಗೊಳಿಸಲಿದೆ. ಆದುದರಿಂದ, ರಾಜ್ಯಾಧ್ಯಕ್ಷರು ಕೂಡಲೇ ಈ ನಿರ್ಧಾರವನ್ನು ಹಿಂಪಡೆದು,ಮುಂದಿನ ದಿನಗಳಲ್ಲಿ ಎಲ್ಲರೂ ಒಂದಾಗಿ ಪಕ್ಷವನ್ನು ಬಲಪಡಿಸುವಂತೆ ಮಾಡಬೇಕಾಗಿದೆ.

✍️ಹೈದರ್ ಆಲಿ ಐವತ್ತೊಕ್ಲು

Leave a Reply

Your email address will not be published. Required fields are marked *

error: Content is protected !!