ಪ್ರತಿಭಾ ಕಾರಂಜಿ: ಇಳಂತಿಲ ಜ್ಞಾನ ಭಾರತಿ ಇಂಗ್ಲಿಷ್ ಮೀಡಿಯಂ ಸ್ಕೂಲ್ ಸತತ ಮೂರನೇ ಬಾರಿ ಚಾಂಪಿಯನ್
ಉಪ್ಪಿನಂಗಡಿ: ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ, ಕ್ಷೇತ್ರ ಸಂಪನ್ಮೂಲ ಕೇಂದ್ರ ಹಾಗೂ ಸಮೂಹ ಸಂಪನ್ಮೂಲ ಕೇಂದ್ರ ಕರಾಯ ಇದರ ವತಿಯಿಂದ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಅಂಡೆತ್ತಡ್ಕ ಇಲ್ಲಿ ನಡೆದ ಕ್ಲಸ್ಟರ್ ಮಟ್ಟದ ಪ್ರಾಥಮಿಕ ಶಾಲಾ ವಿಭಾಗದ ಪ್ರತಿಭಾ ಕಾರಂಜಿ-2024ರಲ್ಲಿ ಇಳಂತಿಲ ಜ್ಞಾನ ಭಾರತಿ ಇಂಗ್ಲಿಷ್ ಮೀಡಿಯಂ ಶಾಲೆ ಚಾಂಪಿಯನ್ ಶಿಪ್ ಪಡೆಯುವ ಮೂಲಕ ಸತತ ಮೂರನೇ ಬಾರಿಗೆ ತನ್ನ ಚಾಂಪಿಯನ್ ಶಿಪ್‌ನ್ನು ಉಳಿಸಿಕೊಂಡಿದೆ.
ಇಂಗ್ಲಿಷ್ ಕಂಠಪಾಠದಲ್ಲಿ ಉಝೈಫ್ ಪ್ರಥಮ, ಛದ್ಮವೇಷದಲ್ಲಿ ಆರಿಫ್ ಪ್ರಥಯ, ಅರೆಬಿಕ್ ಪಠಣದಲ್ಲಿ ಫಾತಿಮಾ ದ್ವಿತೀಯ, ಶಯಾನ್ ದ್ವಿತೀಯ, ಮಿಮಿಕ್ರಿಯಲ್ಲಿ ಶಾಮಿಲ್ ದ್ವಿತೀಯ, ದೇಶಭಕ್ತಿ ಗೀತೆಯಲ್ಲಿ ಅಮ್ಜದ್ ತೃತೀಯ, ಕ್ಲೇ ಮೋಡೆಲ್‌ನಲ್ಲಿ ಮನ್‌ಹ ದ್ವಿತೀಯ, ಹಿಂದಿ ಕಂಠಪಾಠದಲ್ಲಿ ಶಹಾನ ತೃತೀಯ, ಕನ್ನಡ ಕಂಠಪಾಠದಲ್ಲಿ ಖಾಸಿಂ ಪ್ರಥಮ, ಕಥೆ ಹೇಳುವುದರಲ್ಲಿ ಶಝ್ನ ತೃತೀಯ, ಅಭಿನಯ ಗೀತೆಯಲ್ಲಿ ರಾಯಿಫ ಪ್ರಥಮ, ಸಂಸ್ಕೃತ ಧಾರ್ಮಿಕ ಪಠಣದಲ್ಲಿ ಮನ್ವಿತ್ ಪ್ರಥಮ ಸ್ಥಾನ ಗಳಿಸುವ ಮೂಲಕ ಕ್ಲಸ್ಟರ್ ಮಟ್ಟದ ಪ್ರಾಥಮಿಕ ವಿಭಾಗದ ಪ್ರತಿಭಾ ಕಾರಂಜಿಯಲ್ಲಿ ಚಾಂಪಿಯನ್ ಶಿಪ್ ಪಡೆದಿದೆ ಎಂದು ಸಂಸ್ಥೆಯ ಮುಖ್ಯೋಪಾಧ್ಯಾಯರಾದ ಇಬ್ರಾಹಿಂ ಖಲೀಲ್ ಎಚ್ ತಿಳಿಸಿದ್ದಾರೆ.
ಶಾಲಾ ಸಂಚಾಲಕ ಅಬ್ದುಲ್ ರವೂಫ್ ಯು ಟಿ ಹಾಗೂ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಇಕ್ಬಾಲ್ ಜೋಗಿಬೆಟ್ಟು ವಿದ್ಯಾರ್ಥಿಗಳನ್ನು ಮತ್ತು ಶಿಕ್ಷಕರನ್ನು ಅಭಿನಂದಿಸಿದರು.