ಕರಾವಳಿ

ಕೂಡುರಸ್ತೆ, ಬಾಲಾಯ ಪರಿಸರದಲ್ಲಿ ನೀರಿಲ್ಲ ಸಮಸ್ಯೆಯಲ್ಲಿ ಸ್ಥಳೀಯರು..!



ಕೆಲವು ದಿನಗಳಿಂದ ನೀರಿನ ಸಮಸ್ಯೆ ತಲೆದೋರಿರುವ ಹಿನ್ನೆಲೆಯಲ್ಲಿ ಸರ್ವೆ ಗ್ರಾಮದ ಕೂಡುರಸ್ತೆ ಹಾಗೂ ಬಾಲಾಯ ಪರಿಸರದ ಜನತೆ ನೀರಿಗಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣ ಆಗಿದೆ. ಈ ಪ್ರದೇಶದಲ್ಲಿ ಸುಮಾರು 70ರಷ್ಟು ಮನೆಗಳಿದ್ದು ಬಹುತೇಕ ಮನೆಯವರು ಗ್ರಾಮ ಪಂಚಾಯತ್ ನಳ್ಳಿ ನೀರನ್ನೆ ಅವಲಂಬಿಸಿದವರಾಗಿದ್ದಾರೆ. ಕೆಲವು ಸಮಯಗಳಿಂದಲೇ ಈ ಭಾಗದಲ್ಲಿ ನೀರಿನ ಸಮಸ್ಯೆ ತಲೆದೋರಿದ್ದು ಇದೀಗ ಕಳೆದ ಐದು ದಿನಗಳಿಂದ ಈ ಪರಿಸರಕ್ಕೆ ನೀರಿನ ಪೂರೈಕೆ ಸಂಪೂರ್ಣ ನಿಂತು ಹೋಗಿದೆ ಎಂದು ತಿಳಿದು ಬಂದಿದೆ.

ಸಂಬಂಧಪಟ್ಟವರು ಕೂಡಲೇ ನಮ್ಮ ಸಮಸ್ಯೆಯನ್ನು ಮನಗಂಡು ಸಮಸ್ಯೆಗೆ ಪರಿಹಾರ ಮಾಡಿಕೊಡಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಗ್ರಾ.ಪಂ ನಿರ್ಲಕ್ಷ್ಯ ವಹಿಸುತ್ತಿದೆ- ಆಲಿ ಆರೋಪ
ಬೋರ್ ವೆಲ್ ನಲ್ಲಿ ನೀರು ಬತ್ತಿ ಹೋಗಿರುವುದೇ ಇಲ್ಲಿನ ನೀರಿನ ಸಮಸ್ಯೆಗೆ ಪ್ರಮುಖ ಕಾರಣ. ಈ ಬಗ್ಗೆ ಗ್ರಾಮ ಪಂಚಾಯತ್ ಗೆ ವಿಷಯ ತಿಳಿಸಿ ಸಮಸ್ಯೆಗೆ ಪರಿಹಾರ ನೀಡುವಂತೆ ಹಲವು ಬಾರಿ ಮನವಿ ಮಾಡಿದ್ದೇನೆ, ಆದರೆ ಗ್ರಾ.ಪಂನಿಂದ ಯಾವುದೇ ರೀತಿಯ ಸ್ಪಂದನೆ ಸಿಕ್ಕಿಲ್ಲ. ಸಮಸ್ಯೆ ಶೀಘ್ರದಲ್ಲಿ ಬಗೆಹರಿಯದಿದ್ದಲ್ಲಿ ಮುಂದಕ್ಕೆ ಪ್ರತಿಭಟನೆ ನಡೆಸುವುದಾಗಿ ಮುಂಡೂರು ಗ್ರಾ.ಪಂ ಸದಸ್ಯ ಮಹಮ್ಮದ ಆಲಿ ನೇರೋಳ್ತಡ್ಕ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!