‘ಕಾಂಗ್ರೆಸ್ ಗ್ಯಾರಂಟಿ’ ಉಚಿತ ವಿದ್ಯುತ್ ಬಾಡಿಗೆದಾರರಿಗೂ ಅನ್ವಯಿಸುತ್ತಾ..? ಇಲ್ಲಿದೆ ಮಾಹಿತಿ
ಬೆಂಗಳೂರು: ಚುನಾವಣೆಗೆ ಮೊದಲು ಪ್ರಚಾರದ ವೇಳೆ ಭರವಸೆ ನೀಡಿದ್ದ ಐದು ಘೋಷಣೆಗಳನ್ನು ಸಿಎಂ ಸಿದ್ಧರಾಮಯ್ಯ ಘೋಷಣೆ ಮಾಡಿದ್ದು ಅದರಲ್ಲಿ ಗೃಹಜ್ಯೋತಿ ಯೋಜನೆಯೂ ಒಂದು. ಜುಲೈ 1 ರಿಂದ ಬಳಕೆ ಮಾಡುವ ವಿದ್ಯುತ್ ಉಚಿತವಾಗಿರಲಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಈ ಯೋಜನೆ ಮೂಲಕ 200 ಯೂನಿಟ್ ವಿದ್ಯುತ್ ಕಾಂಗ್ರೆಸ್ ಸರ್ಕಾರ ಉಚಿತ ನೀಡುತ್ತಿದೆ.
ಉಚಿತ ವಿದ್ಯುತ್ ಬಾಡಿಗೆದಾರರಿಗೂ ಈ ಯೋಜನೆ ಅನ್ವಯಿಸುತ್ತಾ ಎನ್ನುವ ವಿಚಾರ ಈಗ ಚರ್ಚೆಯಲ್ಲಿರುವ ವಿಷಯ. ಈ ಕುರಿತು ಸಿಎಂ ಸಿದ್ಧರಾಮಯ್ಯರವರು ಸ್ಪಷ್ಟನೆ ನೀಡಿದ್ದಾರೆ.
ಬಾಡಿಗೆದಾರರು ಬಿಲ್ ಕಟ್ಟುತ್ತಿದ್ದರೆ ಉಚಿತ ವಿದ್ಯುತ್ ನೀಡುತ್ತೇವೆ. ಒಂದು ಕಟ್ಟಡದಲ್ಲಿ ಒಂದಕ್ಕಿಂತ ಹೆಚ್ಚು RR ನಂಬರ್ ಇದ್ದರೆ ಹೊಂದಿದ್ದರೆ ಅದನ್ನು ಕಮರ್ಷಿಯಲ್ ಎಂದು ಪರಿಗಣಿಸಲಾಗುವುದು. ಹಾಗಾಗಿ ಬಾಡಿಗೆದಾರರಿಗೆ ‘ಗೃಹಜ್ಯೋತಿ’ ಯೋಜನೆ ಅನ್ವಯವಾಗಲ್ಲ. ವಾಣಿಜ್ಯ ಬಳಕೆದಾರರಿಗೆ ‘ಗೃಹಜ್ಯೋತಿ’ ಯೋಜನೆ ಅನ್ವಯಿಸಲ್ಲ ಎಂದಿದ್ದಾರೆ. ಸಿಂಗಲ್ ಬಿಲ್ಡಿಂಗ್ ನಲ್ಲಿ ಬಾಡಿಗೆದಾರರಿದ್ದರೆ ಮಾತ್ರ ಉಚಿತವಿರುತ್ತದೆ. ಒಂದು ಬಿಲ್ಡಿಂಗ್ ನಲ್ಲಿ ಒಂದು ಮನೆ RR ನಂಬರ್ ಮಾತ್ರ ಪರಿಗಣನೆ ಮಾಡಲಾಗುತ್ತಿದೆ. ಒಂದು ಬಿಲ್ಡಿಂಗ್ನಲ್ಲಿ ಒಂದಕ್ಕಿಂತ ಹೆಚ್ಚು ಆರ್ಆರ್ ನಂಬರ್ಯಿದ್ದರೆ, ಅದರ ಲಾಭವನ್ನು ಬಿಲ್ಡಿಂಗ್ ಮಾಲೀಕರು ಪಡೆದುಕೊಳ್ಳಬಹುದಾಗಿದೆ ಎಂದು ತಿಳಿಸಿದರು.
12 ತಿಂಗಳ ಸರಾಸರಿ ವಿದ್ಯುತ್ ಬಿಲ್ ಪರಿಗಣನೆ:
12 ತಿಂಗಳ ಸರಾಸರಿ ಆಧಾರದಲ್ಲಿ ವಿದ್ಯುತ್ ಬಿಲ್ ಪರಿಗಣೆ ಮಾಡಲಾಗುತ್ತಿದ್ದು, 12 ತಿಂಗಳಲ್ಲಿ ಎಷ್ಟು ಬಳಸುತ್ತಾರೋ ಅದರ ಸರಾಸರಿ ಪಡೆದುಕೊಂಡು 10% ಹೆಚ್ಚು ವಿದ್ಯುತ್ ನೀಡುತ್ತೇವೆ. 12 ತಿಂಗಳ ಆವರೇಜ್ ವಿದ್ಯುತ್ ಬಳಕೆ ಮೇಲೆ 10% ನೀಡುತ್ತೇವೆ. ಸರಾಸರಿ ಬಳಕೆಗೆ 10% ಸೇರಿಸಿ ಹೆಚ್ಚುವರಿ ವಿದ್ಯುತ್ ನೀಡಲಾಗುವುದು. 200 ಯೂನಿಟ್ ವಿದ್ಯುತ್ ಬಳಕೆಗೆ ಯಾವುದೇ ಶುಲ್ಕ ಇರುವುದಿಲ್ಲ ಎಂದು ಸಿಎಂ ತಿಳಿಸಿದ್ದಾರೆ.