ಕರಾವಳಿ

ವಿದ್ಯುತ್ ಶಾಕ್‌ಗೆ ಪವರ್‌ಮ್ಯಾನ್ ಮೃತ್ಯು: ಆಸ್ಪತ್ರೆಗೆ ಭೇಟಿ ನೀಡಿದ ಶಾಸಕರು; ಸಂಜೆಯೊಳಗೆ ವರದಿ ನೀಡುವಂತೆ ಮೆಸ್ಕಾಂಗೆ ಸೂಚನೆ



ಪುತ್ತೂರು: ಕಡಬ ಸಮೀಪದ ತಲೆಕ್ಕಿಯಲ್ಲಿ ವಿದ್ಯುತ್ ತಂತಿ ದುರಸ್ಥಿ ವೇಳೆ ವಿದ್ಯುತ್ ಶಾಕ್ ಹೊಡೆದು ಪುತ್ತೂರು ಮೆಸ್ಕಾಂ ವ್ಯಾಪ್ತಿಯ ಪವರ್ ಮ್ಯಾನ್ ಮೃತಪಟ್ಟಿದ್ದು, ಸುದ್ದಿ ತಿಳಿದು ಸರಕಾರಿ ಆಸ್ಪತ್ರೆಗೆ ಭೇಟಿ ನೀಡಿ ಮೃತದೇಹವನ್ನು ವಿಕ್ಷಣೆ ಮಾಡಿದ ಶಾಸಕರು ಸಹೋದ್ಯೋಗಿಗಳ ರೋಧನವನ್ನು ಕಂಡು ಕಣ್ಣೀರಾದರು.

ತಕ್ಷಣವೇ ಮೆಸ್ಕಾಂ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿದ ಶಾಸಕರು, ಯಾಕೆ ಹೀಗಾಗಿದೆ? ದುರಸ್ಥಿ ಮಾಡುವ ವೇಳೆ ಜೀವಕ್ಕೆ ಹಾನಿಯಾಗಿದೆಯಲ್ವ? ಯಾವ ಕಾರಣಕ್ಕೆ ಹೀಗಾಗಿದೆ? ಕರೆಂಟ್ ಇರುವಾಗ ಕಂಬಕ್ಕೆ ಹತ್ತಿದ್ದಾರಾ ಅಥವಾ ದುರಸ್ಥಿ ಮಾಡುತ್ತಿರುವ ವೇಳೆ ಕರೆಂಟ್ ಚಾರ್ಜ್ ಮಾಡಿದ್ದಾರ? ಇದೆಲ್ಲದರ ಬಗ್ಗೆ ನನಗೆ ಸಂಜೆಯೊಳಗೆ ವರದಿ ನೀಡಬೇಕು ಎಂದು ಸೂಚನೆಯನ್ನು ನೀಡಿದರು.

ವಿದ್ಯುತ್ ದುರಸ್ಥಿ ವೇಳೆ ಬಾಗಲಕೋಟೆ ನಿವಾಸಿ ಪುತ್ತೂರಿನಲ್ಲಿ ಕಳೆದ 8 ವರ್ಷಗಳಿಂದ ಪವರ್‌ಮ್ಯಾನ್ ಆಗಿ ಕೆಲಸ ಮಾಡುತ್ತಿರುವ ದ್ಯಾಮಣ್ ದೊಡ್ಮನಿ ಯವರು ಕಂಬದಲ್ಲೇ ಸಾವನ್ನಪ್ಪಿದ್ದರು. ಮೃತ ಪವರ್ ಮ್ಯಾನ್ ಬಗ್ಗೆ ಸಹೋದ್ಯೋಗಿಗಳಲ್ಲಿ ಶಾಸಕರು ಮಾಹಿತಿ ಕೇಳಿದಾಗ “ ಅವರು ಮದುವೆಯಾಗಿದ್ದು ಅವರಿಗೆ 6 ತಿಂಗಳ ಮಗುವಿದೆ, ಪತ್ನಿ ಕಡಬದಲ್ಲಿದ್ದಾರೆ. ಮೃತಪಟ್ಟ ವಿಚಾರ ಅವರಿಗೆ ತಿಳಿಸಲಿಲ್ಲ ಎಂದು ಹೇಳಿದಾಗ ಶಾಸಕರು ದುಖಿತರಾದರು.

ತಕ್ಷಣವೇ ಅವರನ್ನು ಹುಟ್ಟೂರಿಗೆ ಕರೆದೊಯ್ಯುವಲ್ಲಿ ಬೇಕಾದ ಎಲ್ಲಾ ವ್ಯವಸ್ಥೆಗಳನ್ನು ಮಾಡುವಂತೆ ಸೂಚನೆಯನ್ನು ನೀಡಿದರು.

Leave a Reply

Your email address will not be published. Required fields are marked *

error: Content is protected !!