ಬಯಲಾದ ಅಕ್ರಮ ಸಂಬಂಧ ಆತ್ಮಹತ್ಯೆಗೆ ಶರಣಾದ ಪ್ರೇಮಿಗಳು
ಗಂಡನ ಅಕ್ರಮ ಸಂಬಂಧದ ಹಿನ್ನೆಲೆಯನ್ನು ಪ್ರಶ್ನೆ ಮಾಡಿದ್ದಕ್ಕೆ ಗಂಡ ಹಾಗೂ ಪ್ರೇಯಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕುಷ್ಟಗಿ ತಾಲೂಕು ಮಾಲಗಿತ್ತಿ ಗ್ರಾಮದಲ್ಲಿ ನಡೆದಿದೆ.
ಮಾಲಗಿತ್ತಿ ಗ್ರಾಮದ ವಿವಾಹಿತ ಟ್ರಾಕ್ಟರ್ ಡ್ರೈವರ್ ಪೀರಸಾಬ್ ನೊಂದಿಗೆ ಅದೇ ಗ್ರಾಮದ ಶಾರವ್ವ ಜೊತೆ ಅಕ್ರಮ ಸಂಬಂಧ ಇತ್ತು ಎನ್ನಲಾಗಿದೆ. ಈ ಅಕ್ರಮ ಸಂಬಂಧದ ವಿಷಯ ಪೀರಸಾಬ್ ನ ಪತ್ನಿಗೆ ಗೊತ್ತಾಗಿದ್ದು ಆಕೆ ಗಂಡನ ಅಕ್ರಮದ ಬಗ್ಗೆ ಗಂಡನ ಪ್ರೇಯಸಿ ಶಾರವ್ವ ಜೊತೆ ಜಗಳ ಮಾಡಿದ್ದರು ಎನ್ನಲಾಗಿದೆ. ಮಾತ್ರವಲ್ಲದೆ ಊರಿನ ಹಿರಿಯರ ಮುಂದೆ ಪ್ರಸ್ತಾಪಿಸಿದ್ದಾಳೆ. ಊರಿನ ಹಿರಿಯರು ಈ ವಿಷಯವನ್ನು ಇತ್ಯಾರ್ಥಗೊಳಿಸಿದ್ದರು ಎನ್ನಲಾಗಿದೆ.
ತಮ್ಮಿಬ್ಬರ ಅಕ್ರಮ ಸಂಬಂಧದ ಗುಟ್ಟು ಪ್ರಚಾರ ಆಗಿರುವ ಬಗ್ಗೆ ಮನನೊಂದ ಪಾಗಲ್ ಪ್ರೇಮಿಗಳು ಜಮೀನಿನಲ್ಲಿ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಬಗ್ಗೆ ಪ್ರಕರಣ ದಾಖಲಾಗಿದೆ.