ಕೊನೆಯ ಎಸೆತದಲ್ಲಿ ಬೌಂಡರಿ ಬಾರಿಸಿ ಚೆನ್ನೈಯನ್ನು ಗೆಲ್ಲಿಸಿದ ಜಡೇಜಾರನ್ನು ಬಿಜೆಪಿ ಕಾರ್ಯಕರ್ತ ಎಂದ ಅಣ್ಣಾಮಲೈ- ಜಾಲತಾಣದಲ್ಲಿ ಆಕ್ರೋಶ
ಗುಜರಾತ್ ಟೈಟಾನ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ಗೆದ್ದು ಐಪಿಎಲ್ ಚಾಂಪಿಯನ್ ಪಟ್ಟ ಅಲಂಕರಿಸಿದ ಬೆನ್ನಲ್ಲೇ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾ ಮಲೈ ರವೀಂದ್ರ ಜಡೇಜಾ ಬಗ್ಗೆ ಹೇಳಿದ ಮಾತು ಆಕ್ರೋಶಕ್ಕೆ ಕಾರಣವಾಗಿದೆ.

ಸಿ.ಎಸ್.ಕೆ ಜಯಗಳಿಸಿದ ಬೆನ್ನಲ್ಲೇ ಗುಜರಾತ್ ಮಾದರಿಯ ಮೇಲೆ ದ್ರಾವಿಡ ಮಾದರಿಯ ವಿಜಯ ಎಂದು ಡಿಎಂಕೆ ಹೇಳಿತ್ತು.
ಇದಕ್ಕೆ ಪ್ರತಿಕ್ರಿಯಿಸಿದ್ದ ಅಣ್ಣಾಮಲೈ ಅವರು ರವೀಂದ್ರ ಜಡೇಜಾ ಬಿಜೆಪಿ ಕಾರ್ಯಕರ್ತ ಮತ್ತು ಅವರು ಗುಜರಾತ್ ಮೂಲದವರು. ಅವರ ಪತ್ನಿ ಬಿಜೆಪಿ ಶಾಸಕಿ. ತಮಿಳಿಗನಾಗಿ ನನಗೂ ಹೆಮ್ಮೆ ಇದೆ. ಸಿಎಸ್ ಕೆಗಿಂತ ಜಿಟಿಯಲ್ಲಿ ಹೆಚ್ಚು ತಮಿಳು ಆಟಗಾರರಿದ್ದರು ಎಂದು ಹೇಳಿದ್ದಾರೆ.
ರವೀಂದ್ರ ಜಡೇಜಾ ಪತ್ನಿ 2022ರ ಚುನಾವಣೆಯಲ್ಲಿ ಜಾಮ್ ನಗರ ಕ್ಷೇತ್ರದಿಂದ ಸ್ಪರ್ಧಿಸಿ ಜಯಗಳಿಸಿದ್ದರು.
ಅಣ್ಣಾಮಲೈ ಹೇಳಿಕೆಗೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.