ಕರಾವಳಿ

ಕ್ಯಾನ್ಸರ್ ಪೀಡಿತರಿಗೆ ಕೇಶದಾನ ಮಾಡುವ ಮೂಲಕ ಮಾದರಿಯಾದ ಪುಟ್ಟ ಬಾಲಕ

ಅಡೂರು ಗ್ರಾಮದ ಮಣಿಯೂರಿನ ನವೀನ್ ರಾವ್ ಸಿಂಧ್ಯಾ ಹಾಗೂ ಭವಾನಿ ದಂಪತಿಗಳ 11 ವರ್ಷ ಪ್ರಾಯದ ಪುತ್ರ ರತೀಶ್ ಸಿ ಕ್ಯಾನ್ಸರ್ ಪೀಡಿತರಿಗೆ ಕೇಶದಾನ ಮಾಡುವ ಮೂಲಕ ಮಾದರಿಯಾಗಿದ್ದಾನೆ.

ಈತ ಮುಳ್ಳೇರಿಯಾದ ವಿದ್ಯಾಶ್ರೀ ಶಿಕ್ಷಣ ಕೇಂದ್ರದಲ್ಲಿ ಕಲಿಯುತ್ತಿದ್ದಾಗಲೇ ತನ್ನ ಕೂದಲನ್ನು ಕ್ಯಾನ್ಸರ್ ಪೀಡಿತರಿಗೆ ದಾನ ಮಾಡಬೇಕೆನ್ನುವ ಸಂಕಲ್ಪ ಕೈಗೊಂಡಿದ್ದನು. ಆಗ ಈತನಿಗೆ ಎಂಟು ವರ್ಷ ಪ್ರಾಯವಿತ್ತು. ತಂದೆತಾಯಿಯರು ಈತನ ಇಚ್ಚೆಗೆ ಪೂರಕವಾಗಿ ಒಪ್ಪಿಗೆ ಕೊಟ್ಟಿದ್ದರು. ಮೂರು ವರ್ಷಗಳ ಕಾಲ ಬೆಳೆಸಿದ ಕೂದಲನ್ನು ಆತ ಇದೀಗ ಕತ್ತರಿಸಿ ಸುಳ್ಯದ ಅಮೃತಗಂಗಾ ಸಮಾಜ ಸೇವಾ ಸಂಸ್ಥೆಯ ಉದಯಭಾಸ್ಕರ್ ಅವರ ಮೂಲಕ ಕ್ಯಾನ್ಸರ್ ಪೀಡಿತರಿಗೆ ಹಸ್ತಾಂತರಿಸಿರುತ್ತಾನೆ.

ಪ್ರಸ್ತುತ ಈತ ಈಶ್ವರಮಂಗಲದ ಶ್ರೀ ಗಜಾನನ ಶಾಲೆಯಲ್ಲಿ ಐದನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ.

Leave a Reply

Your email address will not be published. Required fields are marked *

error: Content is protected !!