ಪುತ್ತೂರು ರಿಕ್ಷಾ ಚಾಲಕನ ಪ್ರಾಮಾಣಿಕತೆ
ಪುತ್ತೂರು ಪೇಟೆಯಲ್ಲಿ ರಿಕ್ಷಾದಲ್ಲಿ ಬಿದ್ದು ಸಿಕ್ಕಿದ ಬೆಲೆಬಾಳುವ ಮೊಬೈಲ್ ಪೋನ್ ಒಂದನ್ನು ಅದರ ವಾರಿಸುದಾರರಿಗೆ ಹಿಂತುರಿಗಿಸಿ, ರಿಕ್ಷಾ ಚಾಲಕರೊರ್ವರು ಪ್ರಾಮಾಣಿಕತೆ ಮೆರೆದಿರುವ ಬಗ್ಗೆ ವರದಿಯಾಗಿದೆ.
ಪುತ್ತೂರು ಸ್ನೇಹಸಂಗಮ ರಿಕ್ಷಾ ಚಾಲಕ-ಮಾಲಕ ಸಂಘದ ಸದಸ್ಯ ಕೆ.ಎಂ.ಸುಲೈಮಾನ್ ಕೋಡಿಂಬಾಡಿರವರ ರಿಕ್ಷಾದಲ್ಲಿ ಬುಳೇರಿಕಟ್ಟೆಯ ಕೀರ್ತನ್ ಎಂಬವರ ಮೊಬೈಲ್ ಪೋನ್ ರಿಕ್ಷಾದಲ್ಲಿ ಕಳೆದುಹೋಗಿತ್ತು. ರಿಕ್ಷಾದಲ್ಲಿ ಪತ್ತೆಯಾದ ಮೊಬೈಲ್ ಪೋನ್‌ನ್ನು ಪರಿಶೀಲಿಸಿದ ಕೆ.ಎಂ.ಸುಲೈಮಾನ್ ಕೋಡಿಂಬಾಡಿರವರು ವಾರೀಸುದಾರ ಕೀರ್ತನ್‌ರವರಿಗೆ ಪುತ್ತೂರು ಸುದ್ದಿ ಪತ್ರಿಕಾ ಕಚೇರಿಯಲ್ಲಿ ಹಸ್ತಾಂತರ ಮಾಡಿ ಮಾನವೀಯತೆ ಮೆರೆದಿದ್ದಾರೆ.