ಉಜಿರೆ: ವಿದ್ಯಾರ್ಥಿನಿ ನಾಪತ್ತೆ
ಬೆಳ್ತಂಗಡಿ: ಮೇ 29ರಂದು ಬೆಳಿಗ್ಗೆ ಕ್ರೀಡಾಂಗಣಕ್ಕೆ ಹೋಗಿ ಬರುವುದಾಗಿ ನಿಲಯ ಪಾಲಕರಲ್ಲಿ ತಿಳಿಸಿ ಹೋದ ಉಜಿರೆಯ ಎಸ್.ಡಿ ಎಂ ಕಾಲೇಜಿನ ಕ್ರೀಡಾ ವಸತಿ ಶಾಲೆಯ ಪ್ರಥಮ ಪಿ.ಯು.ಸಿ ವಿದ್ಯಾರ್ಥಿನಿಯೊಬ್ಬಳು ನಾಪತ್ತೆಯಾಗಿದ್ದಾರೆ. ಬೇಲೂರಿನ ದಿವ್ಯಾ. ಎಸ್ ನಾಪತ್ತೆಯಾದ ವಿದ್ಯಾರ್ಥಿನಿ ಎಂದು ಗುರುತಿಸಲಾಗಿದೆ.
ಕ್ರೀಡಾಂಗಣಕ್ಕೆಂದು ಹೋದ ವಿದ್ಯಾರ್ಥಿನಿ ಹಾಸ್ಟೆಲ್ ಗೂ ಹಿಂತಿರುಗದೆ ಮನೆಗೂ ಹೋಗದೆ ನಾಪತ್ತೆಯಾಗಿದ್ದಾರೆ. ಉಜಿರೆ ಶ್ರೀ ಧರ್ಮಸ್ಥಳ ಕ್ರೀಡಾ ವಸತಿ ನಿಲಯದ ಸಹಾಯಕ ನಿಲಯ ಪಾಲಕಿ ನೀಡಿರುವ ದೂರಿನಂತೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.