ರಾಷ್ಟ್ರೀಯ

ಹಾವು ಕಚ್ಚಿದ ಮಗುವಿನ ಪ್ರಾಣ ಉಳಿಸಲು 6 ಕಿ.ಮೀ ದೂರದ ಆಸ್ಪತ್ರೆಗೆ ಓಡಿಕೊಂಡು ಹೋದ ಪೋಷಕರು; ಮಗು ಸಾವು

ಸರಿಯಾದ ರಸ್ತೆ ಇಲ್ಲದ ಕಾರಣ ಹಾವು ಕಚ್ಚಿದ್ದ ಒಂದೂವರೆ ವರ್ಷದ ಮಗುವೊಂದು ಸಕಾಲದಲ್ಲಿ ಚಿಕಿತ್ಸೆ ದೊರೆಯದೆ ಮೃತಪಟ್ಟಿರುವ ಘಟನೆ ತಮಿಳುನಾಡಿನ ವೆಲ್ಲೂರ್‌ ನಲ್ಲಿ ನಡೆದಿರುವುದಾಗಿ ವರದಿಯಾಗಿದೆ.

ಒಂದೂವರೆ ವರ್ಷದ ಮಗುವಿಗೆ ಹಾವು ಕಚ್ಚಿದ್ದು, ಪೋಷಕರು ಮತ್ತು ಸಂಬಂಧಿಕರು ಮಗುವನ್ನು ಸುಮಾರು ಆರು ಕಿಲೋ ಮೀಟರ್‌ ವರೆಗೆ ನಡೆದುಕೊಂಡು ಬಂದು ವೆಲ್ಲೂರ್‌ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಮಗು ದಾರಿ ಮಧ್ಯೆದಲ್ಲಿ ಕೊನೆಯುಸಿರೆಳೆದಿರುವುದಾಗಿ ತಿಳಿದು ಬಂದಿದೆ.

ಸಮರ್ಪಕವಾದ ರಸ್ತೆ, ವಾಹನ ವ್ಯವಸ್ಥೆ ಇಲ್ಲದ ಕಾರಣ, ಆಸ್ಪತ್ರೆಗೆ ತಲುಪಲು ವಿಳಂಬವಾಗಿದ್ದರಿಂದ ಮಗು ಕೊನೆಯುಸಿರೆಳೆಯುವಂತಾಗಿದೆ ಎಂಬ ಆರೋಪ ವ್ಯಕ್ತವಾಗಿದೆ.

Leave a Reply

Your email address will not be published. Required fields are marked *

error: Content is protected !!