ರಾತ್ರಿಯ ಊಟಕ್ಕೆ ಅನ್ಯಕೋಮಿನ ಯುವಕನ ಜೊತೆ ಸ್ಕೂಟಿಯಲ್ಲಿ ಹೋಗುತ್ತಿದ್ದ ಯುವತಿಯನ್ನು ಪ್ರಶ್ನಿಸಿದ ಯುವಕರ ಗುಂಪು
ರಾತ್ರಿಯ ಊಟಕ್ಕೆ ಯುವಕನೊಂದಿಗೆ ಸ್ಕೂಟಿಯಲ್ಲಿ ಹೋಗುತ್ತಿದ್ದ ಯುವತಿಯನ್ನು ಪುರುಷರ ಗುಂಪೊಂದು ಅಡ್ಡ ಹಾಕುವ ವೀಡಿಯೊ ವೈರಲ್ ಆಗಿದೆ. ಯುವತಿ ಹಿಜಾಬ್ ಧರಿಸಿ ತನ್ನನ್ನು ತಾನು ಸಮರ್ಥಿಸಿಕೊಳ್ಳುತ್ತಿರುವುದನ್ನು ವಿಡಿಯೋದಲ್ಲಿ ದಾಖಲಾಗಿದ್ದು ತನಗೆ ಪೋಷಕರ ಅನುಮತಿ ಇದೆ ಎಂದು ಹೇಳಿದ್ದಾರೆ. ಆದಾಗ್ಯೂ, ಒಬ್ಬ ವ್ಯಕ್ತಿ ಅವಳನ್ನು ನಿಂದಿಸುವುದನ್ನು ಮುಂದುವರೆಸುತ್ತಿರುವುದು ವಿಡಿಯೋದಲ್ಲಿ ದಾಖಲಾಗಿದೆ. ಘಟನೆ ಮಧ್ಯಪ್ರದೇಶದ ಇಂದೋರ್ ನಲ್ಲಿ ನಡೆದಿದೆ.

ವೀಡಿಯೊದಲ್ಲಿ, ಈ ಮಾತಿನ ಚಕಮಕಿ ನಡುವೆ ದ್ವಿಚಕ್ರ ವಾಹನವನ್ನು ಸವಾರಿ ಮಾಡುತ್ತಿದ್ದ ಭವೇಶ್ ವ್ಯಕ್ತಿಯು ಭಯಗೊಂಡಿದ್ದರು. ಈ ವೇಳೆ ನಿನಗೆ ಯಾರೂ ಹಾನಿ ಮಾಡುವುದಿಲ್ಲ ಎಂದು ಗುಂಪಿನ ಒಬ್ಬ ವ್ಯಕ್ತಿ ಹೇಳುವುದು ವಿಡಿಯೋದಲ್ಲಿ ದಾಖಲಾಗಿದೆ. ಅವರು ಯುವತಿಯೊಂದಿಗೆ ಮಾತ್ರ ವಾಗ್ವಾದ ನಡೆಸಿದ್ದಾರೆ. ಮುಸ್ಲಿಮೇತರರೊಂದಿಗೆ ಹೊರಗೆ ಹೋಗುವ ಬದಲು ಆನ್‌ಲೈನ್‌ನಲ್ಲಿ ಆಹಾರವನ್ನು ಆರ್ಡರ್ ಮಾಡಲು ಏಕೆ ಸಾಧ್ಯವಾಗಲಿಲ್ಲ ಎಂದು ಅವರು ಪ್ರಶ್ನಿಸುತ್ತಾರೆ.
ವ್ಯಕ್ತಿನೊಬ್ಬ ಏರು ಧ್ವನಿಯಲ್ಲಿ ಇಸ್ಲಾಂ ಧರ್ಮದ ಕಾನೂನುಗಳನ್ನು ಅನುಸರಿಸುತ್ತಿಲ್ಲ ಏಕೆ ಎಂದು ಪ್ರಶ್ನಿಸಿ . ಇಸ್ಲಾಂ ಧರ್ಮದ ಮರ್ಯಾದೆಯನ್ನು ಕಳೆಯಬೇಡಿ ಎಂದು ಎಚ್ಚರಿಸಿಸುತ್ತಾನೆ.
ಗದ್ದಲದ ನಡುವೆ, ಗುಂಪಿನಿಂದ ಒಬ್ಬ ವ್ಯಕ್ತಿ ಭಾವೇಶ್ ಮೇಲೆ ಹಲ್ಲೆಗೆ ಮುಂದಾಗಿದ್ದಾನೆ.
ಮಧ್ಯಪ್ರದೇಶ ಪೊಲೀಸರು ಕೊಲೆ ಯತ್ನ ಪ್ರಕರಣವನ್ನು ದಾಖಲಿಸಿ, ಇಬ್ಬರು ವ್ಯಕ್ತಿಗಳನ್ನು ಬಂಧಿಸಿದ್ದಾರೆ ಮತ್ತು ಏಳು ಶಂಕಿತರನ್ನು ಹೆಸರಿಸಿದ್ದಾರೆ.
ಇಬ್ಬರು ವಿದ್ಯಾರ್ಥಿಗಳು ಊಟದ ನಂತರ ಹೋಟೆಲ್‌ನಿಂದ ಹೊರಟಾಗ ಈ ಘಟನೆ ಸಂಭವಿಸಿದೆ ಮತ್ತು ಕೆಲವು ಪುರುಷರು ಯುವತಿಯನ್ನು ತಡೆದು ವಿಚಾರಣೆ ನಡೆಸಿದರು. ತನಗೆ ಪೋಷಕರ ಅನುಮತಿ ಇದೆ ಎಂದು ಯುವತಿ ವಾದಿಸಿದರು, ಆದರೆ ಪುರುಷರ ಗುಂಪು ಆಕೆಯ ಸ್ನೇಹಿತನ ಮೇಲೆ ಹಲ್ಲೆಗೆ ಮುಂದಾದರು. ಮಧ್ಯಪ್ರವೇಶಿಸಲು ಮುಂದಾದ ಪಕ್ಕದಲ್ಲಿದ್ದವರ ಮೇಲೂ ಹಲ್ಲೆ ನಡೆಸಿದ್ದಾರೆ. ಪೊಲೀಸರು ಆರೋಪಿಗಳ ವಿರುದ್ಧ ಕೊಲೆ ಯತ್ನ ಆರೋಪ ಹೊರಿಸಿದ್ದು ಹಲ್ಲೆ ನಡೆಸಿದ್ದ ಓರ್ವನನ್ನು ಬಂಧಿಸಲಾಗಿದೆ.
ಗಾಯಗೊಂಡಿರುವ ಭಾವೇಶ್ ಸದ್ಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.