ಕೇರಳ: ಪೈವಳಿಕೆಯಲ್ಲಿ ತಮ್ಮನನ್ನು ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿ ಅಣ್ಣ ಪುತ್ತೂರಿನಲ್ಲಿ ಪೊಲೀಸರ ಬಲೆಗೆ
ಪುತ್ತೂರು : ಕೇರಳದಲ್ಲಿ ಸಹೋದರನ ಹತ್ಯೆ ಮಾಡಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಕೇರಳ ಪೊಲೀಸರು ಪುತ್ತೂರಿನಲ್ಲಿ ವಶಕ್ಕೆ ಪಡೆದಿದ್ದಾರೆ. ಆರೋಪಿ ಪುತ್ತೂರಿನಲ್ಲಿ ತಲೆಮರೆಸಿಕೊಂಡಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಕೇರಳ ಪೊಲೀಸರು ಪುತ್ತೂರು ನಗರ ಪೊಲೀಸರ ಸಹಕಾರದಿಂದ ಆರೋಪಿಯನ್ನು ಕೊಂಬೆಟ್ಟು ಬಳಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕಾರ್ಯಾಚರಣೆ ವೇಳೆ ಆರೋಪಿ ದೇವಸ್ಥಾನದ ಬಳಿಯ ಚರಂಡಿಗೆ ಹಾರಿ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡಿದ್ದು ಪುತ್ತೂರು ನಗರ ಮತ್ತು ಕೇರಳ ಪೊಲೀಸರು ಅದನ್ನು ವಿಫಲಗೊಳಿಸಿ ಆರೋಪಿಯನ್ನು ಬಂಧಿಸಿದ್ದಾರೆ.
ಅಣ್ಣನೇ ತನ್ನ ಸಹೋದರನನ್ನು ಕೊಲೆ ಮಾಡಿರುವ ಘಟನೆ ಮಂಜೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯ ಪೈವಳಿಕೆ ಯಲ್ಲಿ ಶನಿವಾರ ಬೆಳಿಗ್ಗೆ ನಡೆದಿತ್ತು.
ಪೈವಳಿಕೆ ಕಳಾಯಿಯ ಪ್ರಭಾಕರ ನೋಂಡಾ (40. ವ )ಕೊಲೆಗೀಡಾದವರು. ಸಹೋದರ ಜಯರಾಮ ನೋಂಡಾ ಈ ಕೃತ್ಯ ನಡೆಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.