ಮಂಗಳೂರು: ಝೀನತ್ ಬಕ್ಷ್ ಯತೀಂ ಖಾನಾ ವತಿಯಿಂದ ಹಜ್ ತರಬೇತಿ ಶಿಬಿರ

ಮಂಗಳೂರು: ಝೀನತ್ ಬಕ್ಷ್ ಯತೀಂ ಖಾನಾ, ಬಂದರು, ಮಂಗಳೂರು, ಸಂಸ್ಥೆಯ ಅಧೀನದಲ್ಲಿ ಪ್ರತಿ ವರ್ಷದಂತೆ ಭಾವೀ ಹಾಜಿ, ಹಾಜಿಮಾಗಳಿಗೆ ಹಜ್ ತರಬೇತಿ ಶಿಬಿರ ಮೇ.17ರಂದು ನಡೆಯಿತು.
ಕಾರ್ಯಕ್ರಮವನ್ನು ದ.ಕ ಜಿಲ್ಲಾ ಖಾಝಿ ತ್ವಾಕಾ ಅಹ್ಮದ್ ಮುಸ್ಲಿಯಾರ್ ಅವರು ದುವಾ ನೆರವೇರಿಸಿ ಉದ್ಘಾಟಿಸಿದರು.
ತರಬೇತಿ ಶಿಬಿರವನ್ನು ಶಾಫಿ ಭಾಂದವರಿಗೆ ಎಸ್.ಪಿ. ಹಂಝ ಸಖಾಫಿ ಹಾಗೂ ಹನಫಿ ಭಾಂದವರಿಗೆ ಮದೀನಾ ದರ್ವೇಝ್ ಮಸೀದಿಯ ಖತೀಬರಾದ ಮೌಲಾನಾ ಮತ್ತೂಲ್ ಹಝತ್ ನಡೆಸಿಕೊಟ್ಟರು.
ಪ್ರಸ್ತಾವಿಕ ಭಾಷಣವನ್ನು ಝೀನತ್ ಬಕ್ಸ್ ಜುಮಾ ಮಸೀದಿಯ ಕಾರ್ಯದರ್ಶಿ ಹಾಜಿ ಮುಹಮ್ಮದ್ ಹನೀಫ್ ಮಾಡಿದರು.

ಬೂಬುಕ ಮಸೀದಿಯ ಖತೀಬರು ಹಾಜಿ ಸಿರಾಜುದ್ದೀನ್ ಫೈಝಿ ಉಪಸ್ಥಿತರಿದ್ದರು.
ಸಂಸ್ಥೆಯ ಸದಸ್ಯರಾದ ಹಾಜಿ ಮುಹಮ್ಮದ್ ಹನೀಫ್ ಸ್ವಾಗತಿಸಿದರು. ಸಂಸ್ಥೆಯ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.