ಗ್ರಾ.ಪಂ ಉಪಚುನಾವಣೆ: ಪೆರ್ನೆ ಗ್ರಾ.ಪಂಗೆ ಕಾಂಗ್ರೆಸ್ ಉಸ್ತುವಾರಿಗಳ ನೇಮಕ
ಪುತ್ತೂರು: ಉಪ ಚುನಾವಣೆ ನಡೆಯಲಿರುವ ಪೆರ್ನೆ ಗ್ರಾಪಂಗೆ ಕಾಂಗ್ರೆಸ್ ಪಕ್ಷದ ಚುನಾವಣಾ ಉಸ್ತುವಾರಿಗಳಾಗಿ ಹಿರಿಯ ಮುಖಂಡರಾದ ಮುರಳೀಧರ್ ರೈ ಮಟಂತಬೆಟ್ಟು ಹಾಗೂ ವಿಟ್ಲ ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ನಿಕಟಪೂರ್ವ ಅಧ್ಯಕ್ಷರಾದ ಡಾ.ರಾಜಾರಾಂ ಕೆ ಬಿಯವರನ್ನು ನೇಮಿಸಲಾಗಿದೆ.
ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಯು ಟಿ ತೌಸೀಫ್ ಅವರ ಕೋರಿಕೆಯ ಮೇರೆಗೆ ಶಾಸಕ ಅಶೋಕ್ ರೈ ಇಬ್ಬರನ್ನು ನೇಮಿಸಿ ಆದೇಶಿಸಿದ್ದಾರೆ.