ಶಾಸಕರಾಗಿ ಅಶೋಕ್ ರೈ ಪ್ರಮಾಣವಚನ
ಭಗವಂತನ ಹೆಸರಿನಲ್ಲಿ ಸತ್ಯಪ್ರಮಾಣ
ಪುತ್ತೂರು: ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕರಾಗಿ ಅಶೋಕ್ ಕುಮಾರ್ ರೈಯವರು ಇಂದು(ಮೇ.22) ನಡೆದ ವಿಧಾನಸಭಾ ಅಧಿವೇಶನದಲ್ಲಿ ಪ್ರಮಾಣವಚನ ಸ್ವೀಕರಿಸಿದರು.

ಭಗವಂತನ ಹೆಸರಿನಲ್ಲಿ ಸತ್ಯಪ್ರಮಾಣ ವಚನ ಸ್ವೀಕರಿಸಿದರು. ನೂತನ ಸರಕಾರದ ಮೊದಲ ವಿಧಾನಸಬಾ ಅಧಿವೇಶನವು ಮೇ.22,23,24ರಂದು ಮೂರು ದಿನಗಳ ಕಾಲ ನಡೆಯಲಿದೆ. ಶಾಸಕರಾಗಿ ಅಶೋಕ್ ರೈಯವರು ಮೊದಲಬಾರಿಗೆ ವಿಧಾನಸಭಾ ಅಧಿವೇಶನದಲ್ಲಿ ಭಾಗವಹಿಸುತ್ತಿದ್ದಾರೆ. ಶಾಸಕರು ಸೂಟ್ ಹಾಕುವ ಮೂಲಕ ಭಿನ್ನವಾಗಿ ಕಾಣಿಸಿಕೊಂಡರು.