ಸುಳ್ಯದಲ್ಲಿ ಗುಡುಗು, ಗಾಳಿ ಸಹಿತ ಭರ್ಜರಿ ಮಳೆ: ಕೆಲವಡೆ ಹಾನಿ
ಸುಡು ಬಿಸಿಲಿನಿಂದ ತತ್ತರಿಸಿದ್ದ ಸುಳ್ಯದಲ್ಲಿ ಇಂದು ಗುಡುಗು ಗಾಳಿ ಸಹಿತ ಮಳೆ ಸುರಿದಿದ್ದು, ಬಿಸಿಲಿನ ತಾಪಕ್ಕೆ ಕಂಗಟ್ಟಿದ್ದ ಜನತೆಗೆ ತಂಪು ನೀಡಿದೆ.

ಸುಳ್ಯ ನಗರ ಸೇರಿದಂತೆ ಸುತ್ತಮುತ್ತಲಿನ ಗ್ರಾಮಾಂತರ ಪ್ರದೇಶಗಳಲ್ಲಿ ಗಾಳಿ ಸಹಿತ ಮಳೆಯಾಗಿದೆ.
ಸುಳ್ಯದ ಜೀವನದಿ ಪಯಸ್ವಿನಿಯಲ್ಲೂ ನೀರು ಖಾಲಿಯಾಗಿದ್ದು ಮಳೆ ಬಾರದೆ ಮುಂದುವರೆದಿದ್ದರೆ ಕುಡಿಯುವ ನೀರಿಗೂ ಸಂಕಷ್ಟ ಎದುರಾಗುತ್ತಿತ್ತು. ಸುಳ್ಯದ ಜೀವನದಿ ಪಯಶ್ವಿನಿ ನದಿಯಲ್ಲಿ ನೀರು ಬತ್ತಿದ ಪರಿಣಾಮ ಅದೆಷ್ಟೋ ಮೀನುಗಳು ಸತ್ತಿದ್ದವು.ಇದೀಗ ಮಳೆ ಸುರಿದು ಜನರು ನಿಟ್ಟುಸಿರು ಬಿಡುವಂತಾಗಿದೆ.

ಆದರೆ ಏಕಾಏಕಿ ಬಿಸಿದ ಭಾರಿ ಗಾಳಿ ಮಳೆಗೆ ಸುಳ್ಯ ತಾಲೂಕಿನ ಕೆಲವೆಡೆ ಹಾನಿ ಸಂಭವಿಸಿದೆ. ಪೆರಾಜೆ ಸಮೀಪ ಬಾರಿ ಗಾಳಿಗೆ ತೆಂಗಿನ ಮರ ಒಂದುಮುರಿದು ಬಿದ್ದಿದ್ದು ಮನೆಯ ಮುಂಭಾಗದಲ್ಲಿ ನಿಲ್ಲಿಸಿದ್ದ ಓಮ್ನಿ ಕಾರ್ ಮತ್ತು ಮನೆಯ ಮುಂಭಾಗದ ಶೀಟಿಗೆ ಹಾನಿಯಾಗಿದೆ.

ಸುಳ್ಯ ನಗರದ ವಿಷ್ಣು ಸರ್ಕಲ್ ಬಳಿ ಆಟೋ ಗ್ಯಾರೇಜ್ ಕಟ್ಟಡದ ಮೇಲೆ ಮರ ಒಂದು ಬಿದ್ದು ಹಾನಿ ಉಂಟಾಗಿದೆ. ದೊಡ್ಡ ತೋಟ ಬಳಿ ರಸ್ತೆಗೆ ಮರ ಬಿದ್ದು ಕೆಲವು ಗಂಟೆಗಳ ಕಾಲ ಸಂಚಾರಕ್ಕೆ ಅಡ್ಡಿಯಾಗಿದೆ.
